ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರಿಣಾಮ: ಐಟಿ ವೆಚ್ಚ ಶೇ. 8ರಷ್ಟು ಇಳಿಕೆ ನಿರೀಕ್ಷೆ

Last Updated 23 ನವೆಂಬರ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ:ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಮಾಹಿತಿ ತಂತ್ರಜ್ಞಾನದ (ಐ.ಟಿ.) ಮೇಲೆ ಮಾಡುವ ವೆಚ್ಚವು 2020ರಲ್ಲಿ ಶೇ 8.4ರಷ್ಟು ಇಳಿಕೆ ಇಳಿಕೆ ಆಗಲಿದ್ದು, ಅದು ₹ 5.86 ಲಕ್ಷ ಕೋಟಿಗಳಷ್ಟಾಗುವ ನಿರೀಕ್ಷೆ ಮಾಡಲಾಗಿದೆ ಎಂದು ಸಂಶೋಧನಾ ಸಂಸ್ಥೆ ಗಾರ್ಟ್ನರ್‌ ಹೇಳಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ 2020ರಲ್ಲಿ ಭಾರತದ ಉದ್ಯಮದಲ್ಲಿ ಆಗಬೇಕಿದ್ದ ಡಿಜಿಟಲೀಕರಣಕ್ಕೆ ಅಡ್ಡಿ ಉಂಟಾಗಿದೆ. ಮಾರುಕಟ್ಟೆಯಲ್ಲಿನ ಅನಿಶ್ಚಿತ ಸ್ಥಿತಿ ಮತ್ತು ನಗದು ಹರಿವು ಕಡಿಮೆ ಆಗಿರುವುದರಿಂದ ಡಿಜಿಟಲ್‌ ಯೋಜನೆಗಳ ಪ್ರಕ್ರಿಯೆಗೆ ತಡೆಯುಂಟಾಗಿದೆ ಎಂದು ಗಾರ್ಟ್ನರ್‌ ರಿಸರ್ಚ್‌ನ ಉಪಾಧ್ಯಕ್ಷ ಅರೂಪ್‌ ರಾಯ್‌ ಹೇಳಿದ್ದಾರೆ.

ಈ ಸಾಂಕ್ರಾಮಿಕದ ಪರಿಸ್ಥಿತಿಯ ಕಾರಣದಿಂದಾಗಿ ಹಲವು ಸಂಘ–ಸಂಸ್ಥೆಗಳು ತಮ್ಮ ಐ.ಟಿ. ತಂತ್ರಗಾರಿಕೆ ಮತ್ತು 2021ರಲ್ಲಿ ಐ.ಟಿ. ಮೇಲಿನ ವೆಚ್ಚ ಹೆಚ್ಚಿಸುವ ಕುರಿತು ಮರುಚಿಂತನೆ ಮಾಡುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ಐ.ಟಿ ವೆಚ್ಚವು 2021ರಲ್ಲಿ ಶೇ 6ರಷ್ಟು ಹೆಚ್ಚಾಗಲಿದ್ದು, ₹ 6.06 ಲಕ್ಷ ಕೋಟಿಗೆ ತಲುಪುವ ಅಂದಾಜು ಮಾಡಲಾಗಿದೆ.

ಎಂಟರ್‌ಪ್ರೈಸಸ್‌ ಸಾಫ್ಟ್‌ವೇರ್‌, ಐ.ಟಿ. ಸೇವೆಗಳು ಮತ್ತು ಸಂವಹನ ಸೇವೆಗಳ ಮೇಲಿನ ವೆಚ್ಚವು ಕ್ರಮವಾಗಿ ಶೇ 7ರಷ್ಟು, ಶೇ 3.7ರಷ್ಟು ಹಾಗೂ ಶೇ 4.9ರಷ್ಟು ಹೆಚ್ಚಾಗುವ ಅಂದಾಜು ಮಾಡಲಾಗಿದೆ.

2021ರಲ್ಲಿ ಡಿಜಿಟಲ್‌ ಇಂಡಿಯಾ ಅಭಿಯಾನವು ಹೊಸ ಎತ್ತರವನ್ನು ತಲುಪಲಿದೆ. ಎಲ್ಲಾ ವಲಯಗಳ ಉದ್ಯಮಗಳು ಐ.ಟಿ. ಮೇಲೆ ಮಾಡುವ ವೆಚ್ಚವನ್ನು ಹೆಚ್ಚಿಸಲಿವೆ. ಸಾಂಕ್ರಾಮಿಕದ ಸ್ಥಿತಿಯು ಎಲ್ಲಿಂದ ಬೇಕಿದ್ದರೂ ಕೆಲಸ ನಿರ್ವಹಿಸುವ ಯೋಜನೆಗಳನ್ನು ಪ್ರಯೋಗಿಕವಾಗಿ ಜಾರಿಗೊಳಿಸಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ರಾಯ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT