ಗುರುವಾರ , ಸೆಪ್ಟೆಂಬರ್ 24, 2020
20 °C

‘ಡಿಜಿಟಲ್ ಪರಿವರ್ತನೆಗೆ ಐಟಿಸಿ ವೇಗ’

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭವಿಷ್ಯದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿ ಇರಬೇಕು ಎಂಬ ಉದ್ದೇಶದಿಂದ ಐಟಿಸಿ ಕಂಪನಿಯು ಡಿಜಿಟಲ್ ಪರಿವರ್ತನೆಗೆ ಹೆಚ್ಚಿನ ವೇಗ ನೀಡಿದೆ ಎಂದು ಕಂಪನಿಯ ಅಧ್ಯಕ್ಷ ಸಂಜೀವ್ ಪುರಿ ಹೇಳಿದರು.

ಡಿಜಿಟಲೀಕರಣ ಪ್ರಕ್ರಿಯೆಯು ಅದಾಗಲೇ ಜಾರಿಯಲ್ಲಿ ಇತ್ತು. ಆದರೆ, ಕೋವಿಡ್–19 ಸಾಂಕ್ರಾಮಿಕವು ಈ ಪ್ರಕ್ರಿಯೆಗೆ ವೇಗ ನೀಡಿದೆ. ಕಂಪನಿಯು ಮುಂಚೂಣಿಯಲ್ಲಿ ಇರುವ ಗುರಿಯೊಂದಿಗೆ ಹೊಸ ಕಾಲದ ತಂತ್ರಜ್ಞಾನಗಳನ್ನು ತನ್ನದಾಗಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆ, ಮೆಷಿನ್‌ ಲರ್ನಿಂಗ್‌ನಂತಹ ತಂತ್ರಜ್ಞಾನಗಳನ್ನು ಎಲ್ಲ ಉದ್ಯಮಗಳೂ ಅಳವಡಿಸಿಕೊಳ್ಳುತ್ತಿವೆ ಎಂದು ಅವರು ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಹೇಳಿದರು. ಡಿಜಿಟಲ್‌ ವ್ಯವಸ್ಥೆಗಳಲ್ಲಿ ಐಟಿಸಿ ಕೂಡ ಗಣನೀಯ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ ಎಂದು ತಿಳಿಸಿದರು.

‘ಇ–ಕಾಮರ್ಸ್‌ ವೇದಿಕೆಗಳಲ್ಲಿ ಐಟಿಸಿ ಕಂಪನಿಯ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದಿದ್ದರ ಪರಿಣಾಮವಾಗಿ ಕಂಪನಿಯ ಎಫ್‌ಎಂಸಿಜಿ ಉತ್ಪನ್ನಗಳು ಹೆಚ್ಚಿನ ಮಾರಾಟವನ್ನು ದಾಖಲಿಸುವಂತೆ ಆಯಿತು’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು