ಸೋಮವಾರ, ಮಾರ್ಚ್ 27, 2023
31 °C

ಐಟಿಸಿ ಲಾಭ ಶೇ 23ರಷ್ಟು ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಐಟಿಸಿ ಲಿಮಿಟೆಡ್‌ನ ಡಿಸೆಂಬರ್‌ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇಕಡ 23.09ರಷ್ಟು ಏರಿಕೆ ಆಗಿದ್ದು, ಲಾಭವು ₹ 5,070 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 4,118 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಷೇರುದಾರರಿಗೆ ಕಂಪನಿಯು ಪ್ರತಿ ಷೇರಿಗೆ ₹ 6ರಷ್ಟು ಮಧ್ಯಂತರ ಲಾಭಾಂಶ ಘೋಷಣೆ ಮಾಡಿದೆ.

ಕಂಪನಿಯ ಕಾರ್ಯಾಚರಣೆ ವರಮಾನವು ಶೇ 3.56ರಷ್ಟು ಬೆಳವಣಿಗೆ ಕಂಡಿದ್ದು ₹ 19,020 ಕೋಟಿಗೆ ತಲುಪಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಲಾಗಿದೆ. ‘ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆಯು ಮಂದವಾಗಿದೆ. ಆದರೆ ಅದು ಹೆಚ್ಚಳ ಕಾಣುತ್ತಿದೆ’ ಎಂದು ಕಂಪನಿ ತಿಳಿಸಿದೆ.

ಕಂಪನಿಯ ವೆಚ್ಚಗಳು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 3.29ರಷ್ಟು ಕಡಿಮೆ ಆಗಿವೆ. ಸಿಗರೇಟ್‌ ವಹಿವಾಟನ್ನು ಒಳಗೊಂಡಿರುವ ಎಫ್‌ಎಂಸಿಜಿ ವಹಿವಾಟುಗಳಿಂದ ಕಂಪನಿಯು ₹ 12,934 ಕೋಟಿ ವರಮಾನ ಗಳಿಸಿದೆ. ಸಿಗರೇಟು ವಹಿವಾಟಿನಿಂದ ಕಂಪನಿಗೆ ₹ 8,085 ಕೋಟಿ ವರಮಾನ ಬಂದಿದೆ. ಎಫ್‌ಎಂಸಿಜಿ ವಹಿವಾಟಿನ ಭಾಗವಾಗಿರುವ ಪ್ಯಾಕ್ ಮಾಡಿರುವ ಆಹಾರ, ಕುರುಕಲು, ಪಾನೀಯ ಮುಂತಾದವುಗಳ ಮಾರಾಟದಿಂದ ಕಂಪನಿಯು ₹ 4,848 ಕೋಟಿ ವರಮಾನ ಗಳಿಸಿದೆ.

ಕಂಪನಿಯ ಹೋಟೆಲ್ ವಹಿವಾಟುಗಳಿಂದ ಬರುವ ವರಮಾನವು ಶೇ 49.19ರಷ್ಟು ಹೆಚ್ಚಾಗಿದ್ದು ₹ 739 ಕೋಟಿಗೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು