ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್‌ ಏರ್‌ವೇಸ್‌ನಲ್ಲಿ ₹ 1,375 ಕೋಟಿ ಹೂಡಿಕೆ ಮಾಡಲಿರುವ ಜಲನ್ ಕಲ್‌ರಾಕ್‌

Last Updated 1 ಜುಲೈ 2021, 14:49 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕವಾಗಿ ದಿವಾಳಿ ಆಗಿರುವ ಜೆಟ್‌ ಏರ್‌ವೇಸ್‌ ಕಂಪನಿಯ ಪುನಶ್ಚೇತನಕ್ಕೆ ಜಲನ್ ಕಲ್‌ರಾಕ್‌ ಒಕ್ಕೂಟವು ಒಟ್ಟಾರೆ ₹ 1,375 ಕೋಟಿ ಹೂಡಿಕೆ ಮಾಡಲಿದೆ.

ಒಟ್ಟಾರೆ ಮೊತ್ತದಲ್ಲಿ ಸಾಲದಾತರಿಗೆ ಮತ್ತು ಷೇರುದಾರರಿಗೆ ಪಾವತಿಸಲಿರುವ ₹ 475 ಕೋಟಿ ಮೊತ್ತವೂ ಒಳಗೊಂಡಿದೆ. ಕಂಪನಿಯ ಸುಗಮ ಕಾರ್ಯಾಚರಣೆಗಾಗಿ ಬಂಡವಾಳ ವೆಚ್ಚ ಮತ್ತು ದುಡಿಯುವ ಬಂಡವಾಳದ ಅಗತ್ಯಕ್ಕಾಗಿ ₹ 900 ಕೋಟಿ ಹೂಡಿಕೆ ಆಗಲಿದೆ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಆದೇಶದಲ್ಲಿ ವಿವರಿಸಲಾಗಿದೆ.

ಕಾರ್ಪೊರೇಟ್‌ ಇನ್‌ಸಾಲ್ವೆನ್ಸಿ ರೆಸಲ್ಯೂಷನ್‌ ಪ್ರೋಸೆಸ್‌ (ಸಿಐಆರ್‌ಪಿ) ವೆಚ್ಚ ₹ 475 ಕೋಟಿ ಮೊತ್ತವನ್ನೂ ಇದು ಒಳಗೊಂಡಿದೆ.

ಅಲ್ಲದೆ, ಕಂಪನಿಯ ಷೇರುಗಳಲ್ಲಿಒಕ್ಕೂಟವು ಗರಿಷ್ಠ ₹ 600 ಕೋಟಿಗಳಷ್ಟು ಹೂಡಿಕೆ ಮಾಡಲಿದೆ. ಜೆಟ್‌ ಏರ್‌ವೇಸ್‌ ಪುನಶ್ಚೇತನಕ್ಕೆ ಜಲನ್ ಕಲ್‌ರಾಕ್‌ ಒಕ್ಕೂಟ ಸಲ್ಲಿಸಿದ್ದ ಪ್ರಸ್ತಾವಕ್ಕೆ ಎನ್‌ಸಿಎಲ್‌ಟಿ ಜೂನ್‌ 22ರಂದು ಒಪ್ಪಿಗೆ ನೀಡಿತ್ತು.

ಭಾರಿ ಕಡಿತ: ಕಂಪನಿಯಿಂದ ₹ 7,807 ಕೋಟಿ ವಸೂಲಿ ಮಾಡಲು ಎಸ್‌ಬಿಐ ನೇತೃತ್ವದಲ್ಲಿ ಸಾಲದಾತರು ಎನ್‌ಸಿಎಲ್‌ಟಿ ಅಡಿ ದಿವಾಳಿ ಪ್ರಕ್ರಿಯೆಗೆ ಚಾಲನೆ ನೀಡಿದ್ದವು. ಆದರೆ, ‌ಪುನಶ್ಚೇತನ ಯೋಜನೆಯಡಿ ಸಾಲದಾತರಿಗೆ ₹ 380 ಕೋಟಿ ಮಾತ್ರ ಸಿಗಲಿದೆ. ಅಂದರೆ ವಸೂಲಿ ಮಾಡಲು ಉದ್ದೇಶಿಸಿದ ಮೊತ್ತದಲ್ಲಿ ಶೇ 95ರಷ್ಟು ಕಡಿತ ಆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT