ಭಾನುವಾರ, ಆಗಸ್ಟ್ 18, 2019
25 °C
ಆರ್‌ಬಿಐನ ಹೆಚ್ಚುವರಿ ಹಣ ವರ್ಗಾವಣೆಗೆ ಒಲವು

ಜಲನ್‌ ಸಮಿತಿ ವರದಿ ಅಂತಿಮ

Published:
Updated:
Prajavani

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿ ಇರುವ ಹೆಚ್ಚುವರಿ ನಗದಿನ ಕೆಲ ಭಾಗವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವ ಸಂಬಂಧ ರಚಿಸಲಾಗಿದ್ದ ಬಿಮಲ್‌ ಜಲನ್‌ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಿದೆ.

ಸಮಿತಿಯು ಈಗ ತನ್ನ ವರದಿಯನ್ನು ಅಂತಿಮಗೊಳಿಸಿದೆ. ಇನ್ನು ಮುಂದೆ ಸಮಿತಿಯು ಮತ್ತೆ ಸಭೆ ಸೇರುವುದಿಲ್ಲ ಎಂದು ಬುಧವಾರ ಇಲ್ಲಿ ನಡೆದ ಸಭೆಯ ನಂತರ ಅಧಿಕೃತ ಮೂಲಗಳು ತಿಳಿಸಿವೆ.

ಆರ್‌ಬಿಐ ತನ್ನ ಬಳಿ ಇರುವ ಹೆಚ್ಚುವರಿ ನಗದಿನ ಕೆಲ ಭಾಗವನ್ನು ಮುಂದಿನ 3 ರಿಂದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಸಮಿತಿಯು ಶಿಫಾರಸು ಮಾಡಲಿದೆ ಎಂದು ನಿರೀಕ್ಷಿಸ
ಲಾಗಿದೆ. ಸರ್ಕಾರಕ್ಕೆ ಎಷ್ಟು ಮೊತ್ತ ವರ್ಗಾಯಿಸಲು ಸಮಿತಿ ನಿರ್ಧರಿಸಿದೆ ಎನ್ನುವುದರ ಕುರಿತು ಮಾಹಿತಿ ನೀಡಲು ಮೂಲಗಳು ನಿರಾಕರಿಸಿವೆ.

ಹೆಚ್ಚುವರಿ ನಗದು ವರ್ಗಾ
ವಣೆಯಿಂದ ಕೇಂದ್ರ ಸರ್ಕಾರವು ತನ್ನ ವಿತ್ತೀಯ ಕೊರತೆ ಗುರಿ ತಲುಪಲು ಸಾಧ್ಯವಾಗಲಿದೆ. ಜತೆಗೆ ಸರ್ಕಾರವು ಆರ್‌ಬಿಐನಿಂದ ₹ 90 ಸಾವಿರ ಕೋಟಿ
ಗಳ ಲಾಭಾಂಶವನ್ನೂ ನಿರೀಕ್ಷಿಸಿದೆ.

ಆರ್‌ಬಿಐ ತನ್ನ ಬಂಡವಾಳ ಮೀಸಲು ಪ್ರಮಾಣವನ್ನು ಜಾಗತಿಕ
ವಾಗಿ ಬಳಕೆಯಲ್ಲಿರುವ ನಿಯಮ
ಗಳ ಅನ್ವಯ ನಿಗದಿಪಡಿಸ
ಬೇಕು. ಹೆಚ್ಚುವರಿ ಮೊತ್ತವನ್ನು ಕೇಂದ್ರಕ್ಕೆ ವರ್ಗಾಯಿಸಬೇಕು ಎನ್ನು
ವುದು ಹಣಕಾಸು ಸಚಿವಾಲಯದ ನಿಲುವಾಗಿದೆ. ಇದು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಆರ್‌ಬಿಐ ಬಳಿ ₹ 9.6 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳ ಇದೆ ಎಂದು ಅಂದಾಜಿಸಲಾಗಿದೆ.

Post Comments (+)