ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45 ಕೋಟಿ ದಾಟಿದ ಜಿಯೊ ಬಳಕೆದಾರರ ಸಂಖ್ಯೆ

Published 4 ಜನವರಿ 2024, 13:42 IST
Last Updated 4 ಜನವರಿ 2024, 13:42 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿ ದೊಡ್ಡ ದೂರಸಂಪರ್ಕ ಕಂಪನಿಯಾದ ರಿಲಯನ್ಸ್‌ ಜಿಯೊ 2023ರ ಅಕ್ಟೋಬರ್‌ನಲ್ಲಿ ಹೊಸದಾಗಿ 31.59 ಲಕ್ಷ ಮತ್ತು ಭಾರ್ತಿ ಏರ್‌ಟೆಲ್‌ 3.52 ಲಕ್ಷದಷ್ಟು ಮೊಬೈಲ್‌ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಮಾಸಿಕ ಚಂದಾದಾರರ ಅಂಕಿ ಅಂಶಗಳು ತಿಳಿಸಿವೆ.

ವೋಡಾಫೋನ್‌ ಐಡಿಯಾ ಅಕ್ಟೋಬರ್‌ನಲ್ಲಿ 20.44 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. 31.59 ಲಕ್ಷ ಬಳಕೆದಾರರ ಸೇರ್ಪಡೆಯೊಂದಿಗೆ ಜಿಯೊ ಚಂದಾದಾರರ ಸಂಖ್ಯೆ ಸೆಪ್ಟೆಂಬರ್‌ನಲ್ಲಿದ್ದ 44.92 ಕೋಟಿಯಿಂದ 45.23 ಕೋಟಿಗೆ ಏರಿಕೆ ಆಗಿದೆ. 3.52 ಲಕ್ಷ ಚಂದಾದಾರರ ಸೇರ್ಪಡೆಯಿಂದ, ಏರ್‌ಟೆಲ್‌ ಬಳಕೆದಾರರ ಸಂಖ್ಯೆಯು ಅಕ್ಟೋಬರ್‌ನಲ್ಲಿ 37.82 ಕೋಟಿಗೆ ಹೆಚ್ಚಳವಾಗಿದೆ.

ವೋಡಾಫೋನ್ ಐಡಿಯಾ ಲಿಮಿಟೆಡ್‌ನ (ವಿಐಎಲ್) ಚಂದಾದಾರರ ಸಂಖ್ಯೆಯು 22.54 ಕೋಟಿ ಆಗಿದೆ ಎಂದು ಟ್ರಾಯ್‌ ಅಂಕಿ–ಅಂಶಗಳು ತಿಳಿಸಿವೆ. ವಿಐಎಲ್ ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿದೆ. ಜೊತೆಗೆ, ಚಂದಾದಾರರ ಸಂಖ್ಯೆ ಇಳಿಯುತ್ತಲೇ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT