ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ಜಿ ವೇಗದ ನೆಟ್‌ವರ್ಕ್‌ ನೀಡಲು 1 ಲಕ್ಷ ಮೊಬೈಲ್‌ ಟವರ್ ಅಳವಡಿಸಿದ ಜಿಯೊ

Last Updated 25 ಮಾರ್ಚ್ 2023, 12:42 IST
ಅಕ್ಷರ ಗಾತ್ರ

ನವದೆಹಲಿ: ದೇಶದ ನಂಬರ್‌ 1 ಶ್ರೀಮಂತ ಮುಕೇಶ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ದೇಶದಾದ್ಯಂತ ಸುಮಾರು 1 ಲಕ್ಷ ಮೊಬೈಲ್‌ ಟವರ್‌ಗಳನ್ನು ಅಳವಡಿಕೆ ಮಾಡಿದೆ ಎಂದು ದೂರಸಂಪರ್ಕ ಇಲಾಖೆಯ ದತ್ತಾಂಶದಿಂದ ಗೊತ್ತಾಗಿದೆ.

5ಜಿ ಅಡಿ ವೇಗದ ಇಂಟರ್ನೆಟ್ ನೀಡುವ ಸಲುವಾಗಿ ಇಷ್ಟು ಪ್ರಮಾಣದ ಹೊಸ ಮೊಬೈಲ್‌ ಟವರ್‌ಗಳನ್ನು ಜಿಯೋ ಅಳವಡಿಸಿದೆ. ಇದು ತನ್ನ ಸಮೀಪದ ಪ್ರತಿಸ್ಪರ್ಧಿಗಿಂತ 5 ಪಟ್ಟು ಹೆಚ್ಚು.

ದೂರಸಂಪರ್ಕ ಇಲಾಖೆಯ ದತ್ತಾಂಶದ ಪ್ರಕಾರ ಜಿಯೋ, 700 MHz ಹಾಗೂ 3,500 MHz ಸಾಮರ್ಥ್ಯದ 99,897 ಟವರ್‌ಗಳನ್ನು ಅಳವಡಿಸಿದೆ. ತನ್ನ ಸಮೀಪದ ಪ್ರತಿಸ್ಪರ್ಧಿ ಏರ್‌ಟೆಲ್‌ 22,219 ಟವರ್‌ಗಳನ್ನು ಅಳವಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT