ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜುಲೈ 3ರಿಂದ ಜಿಯೊ ದರ ಏರಿಕೆ

Published 27 ಜೂನ್ 2024, 16:22 IST
Last Updated 27 ಜೂನ್ 2024, 16:22 IST
ಅಕ್ಷರ ಗಾತ್ರ

ನವದೆಹಲಿ: ಜುಲೈ 3ರಿಂದ ಜಾರಿಗೆ ಬರುವಂತೆ ಮೊಬೈಲ್‌ ಸೇವೆಗಳ ಶುಲ್ಕವನ್ನು ಶೇ 12ರಿಂದ ಶೇ 27ರಷ್ಟು ಏರಿಕೆ ಮಾಡಲಾಗುವುದು ಎಂದು ರಿಲಯನ್ಸ್ ಜಿಯೊ ಇನ್ಫೊಕಾಮ್‌ ಕಂಪನಿ ತಿಳಿಸಿದೆ.

ಎರಡೂವರೆ ವರ್ಷಗಳ ಬಳಿಕ ಜಿಯೊ, ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯೂ ಮುಗಿದಿದೆ. ಹಾಗಾಗಿ, ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಕೂಡ ಶುಲ್ಕ ಏರಿಕೆ ಮಾಡುವುದು ಸನ್ನಿಹಿತವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘5ಜಿ ಸೇವೆ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಹೂಡಿಕೆ ಮೂಲಕ ದೂರಸಂಪರ್ಕ ವಲಯದಲ್ಲಿ ಹೊಸ ಅನ್ವೇಷಣೆ ಮತ್ತು ಸುಸ್ಥಿರ ಬೆಳವಣಿಗೆಗೆ ಒತ್ತು ನೀಡಬೇಕಿದೆ. ಹಾಗಾಗಿ, ಶುಲ್ಕ ಏರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ರಿಲಯನ್ಸ್ ಜಿಯೊ ಇನ್ಫೊಕಾಮ್‌ ಮುಖ್ಯಸ್ಥ ಆಕಾಶ್‌ ಎಂ. ಅಂಬಾನಿ ತಿಳಿಸಿದ್ದಾರೆ.

₹666 ಮೊತ್ತದ ಅನಿಯಮಿತ ಯೋಜನೆಯ ದರವನ್ನು (84 ದಿನ) ₹799ಕ್ಕೆ ಹೆಚ್ಚಿಸಿದೆ. ₹155 ಇದ್ದ ರೀಚಾರ್ಜ್‌ ಪ್ಲಾನ್‌‌ ದರ ₹189ಕ್ಕೆ ಏರಲಿದೆ.

75 ಜಿಬಿ ಡೇಟಾ ಸೇವೆಯ ಫೋಸ್ಟ್‌ಪೇಯ್ಡ್‌ ದರವನ್ನು ₹399ರಿಂದ ₹449ಕ್ಕೆ ಹೆಚ್ಚಿಸಿದೆ. 

ಎರಡು ಹೊಸ ಆ್ಯಪ್: ಜಿಯೊ ಸೇಫ್‌ ಮತ್ತು ಜಿಯೊ ಟ್ರಾನ್ಸ್‌ಲೇಟ್‌ ಎಂಬ ಎರಡು ಅಪ್ಲಿಕೇಷನ್‌ಗಳನ್ನು ಬಿಡುಗಡೆಗೊಳಿಸಿದೆ. ಜಿಯೊ ಸೇಫ್‌ನ ಮಾಸಿಕ ದರ ₹199 ಆಗಿದೆ. ಸುರಕ್ಷಿತ ಕರೆ, ಮೆಸೇಜಿಂಗ್‌ ಮತ್ತು ಫೈಲ್ ಟ್ರಾನ್ಸ್‌ಫರ್ ಸೇವೆಯನ್ನು ಒದಗಿಸಲಿದೆ.

‌ಜಿಯೊ ಟ್ರಾನ್ಸ್‌ಲೇಟ್‌ ಆ್ಯಪ್‌ನಲ್ಲಿ ತಿಂಗಳಿಗೆ ₹99 ನೀಡಿದರೆ ಕೃತಕ ಬುದ್ಧಿಮತ್ತೆಯಿಂದ ಚಾಲಿತ ಆ್ಯಪ್, ಧ್ವನಿ, ಕರೆ, ಸಂದೇಶವನ್ನು ಭಾಷಾಂತರ ಮಾಡಬಹುದಾಗಿದೆ. ಜಿಯೊ ಬಳಕೆದಾರರಿಗೆ ಒಂದು ವರ್ಷದವರೆಗೆ ಈ ಎರಡೂ ಆ್ಯಪ್‌ಗಳು ಉಚಿತವಾಗಿ ದೊರೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT