ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದ ಕೆಲಸ: ಮಾಹಿತಿ ಹುಡುಕಾಟ

Last Updated 24 ಮೇ 2020, 17:16 IST
ಅಕ್ಷರ ಗಾತ್ರ

ಮುಂಬೈ: ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಫೆಬ್ರುವರಿ–ಮೇ ಅವಧಿಯಲ್ಲಿ ದೇಶದಲ್ಲಿ ಮನೆಯಿಂದ ಕೆಲಸ ಮಾಡುವುದಕ್ಕೆ ಇರುವ ಅವಕಾಶಗಳ ಬಗ್ಗೆ ಅತಿ ಹೆಚ್ಚಿನ ಹುಡುಕಾಟ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.

ಉದ್ಯೋಗ ತಾಣ ‘ಇನ್‌ಡೀಡ್‌’ ನಡೆಸಿರುವ ಸಮೀಕ್ಷೆಯ ಪ್ರಕಾರ, ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿಯೇ ಕುಳಿತು ಮಾಡಬಹುದಾದ ಕೆಲಸಗಳಿಗಾಗಿ ಜನರು ಹೆಚ್ಚಿನ ಹುಡುಕಾಟ ನಡೆಸಲಾರಂಭಿಸಿದ್ದಾರೆ.

ಬೇರೆಲ್ಲಾ ರೀತಿಯ ಕೆಲಸಗಳಿಗೆ ಹೋಲಿಸಿದರೆ ಈ ರೀತಿಯ ಕೆಲಸದ ಹುಡುಕಾಟವು ಶೇ 377ರಷ್ಟು ಏರಿಕೆ ಕಂಡಿದೆ ಎಂದು ತಿಳಿಸಿದೆ.

ಗ್ರಾಹಕರ ಖರೀದಿ ಪ್ರವೃತ್ತಿ ಬದಲು

ಲಾಕ್‌ಡೌನ್‌ನಿಂದಾಗಿ ಜನರ ಖರೀದಿ ಪ್ರವೃತ್ತಿಯಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ ಎಂದು ಉದ್ಯಮವಲಯ ತಿಳಿಸಿದೆ.

ನಗರ ಪ್ರದೇಶಗಳಲ್ಲಿ ಜನರು ಪ್ರಮಾಣದ ಲೆಕ್ಕದಲ್ಲಿ ದೊಡ್ಡ ಪ್ಯಾಕ್‌ಗಳ ಖರೀದಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅತಿ ಹೆಚ್ಚು ಜನದಟ್ಟಣೆ ಇರುವಂತಹ ಹೈಪರ್‌ಮಾರ್ಕೆಟ್‌ ಮತ್ತು ರಿಟೇಲ್‌ ಮಳಿಗೆಗಳಿಗೆ ನಿರಂತರವಾಗಿ ಭೇಟಿ ನೀಡಲು ಇಷ್ಟಪಡುತ್ತಿಲ್ಲ. ಒಮ್ಮೆ ಭೇಟಿ ನೀಡಿದರೆ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.

ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದ್ದು, ಲಾಕ್‌ಡೌನ್‌ ಬಿಗಿಗೊಂಡರೆ ಅಗತ್ಯ ವಸ್ತುಗಳ ಕೊರತೆ ಬೀಳಬಾರದು ಎಂದು ಈ ರೀತಿಯಲ್ಲಿ ಖರೀದಿಸುತ್ತಿದ್ದಾರೆ. ಇನ್ನೂ ಕೆಲವು ತಿಂಗಳವರೆಗೆ ಇದು ಮುಂದುವರಿಯಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಮೌಲ್ಯಯುತ ಖರೀದಿಗೆ ಹೆಚ್ಚು ಗಮನ ನೀಡುತ್ತಿದ್ದಾರೆ.

ನೆಸ್ಲೆ, ಡಾಬರ್‌, ಗೊದ್ರೇಜ್‌ ಕನ್ಸುಮರ್‌ ಪ್ರಾಡಕ್ಟ್ಸ್‌, ಪಾರ್ಲೆ ಪ್ರಾಡಕ್ಟ್ಸ್‌ ಮತ್ತು ವಿಪ್ರೊ ಕನ್ಸ್ಯುಮರ್‌ ಕೇರ್‌ ಕಂಪನಿಗಳ ಪ್ರಕಾರ, ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಕೈಗೆಟುಕುವ ಉತ್ಪನ್ನಗಳ ಖರೀದಿ ಹೆಚ್ಚಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT