ಗುರುವಾರ , ಅಕ್ಟೋಬರ್ 1, 2020
27 °C

ಚಿನ್ನಕ್ಕೆ ₹74 ರಿಯಾಯಿತಿ: ಜೋಯಾಲುಕ್ಕಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರತಿ ಒಂದು ಗ್ರಾಂ ಚಿನ್ನದ ದರದ ಮೇಲೆ ₹ 74 ರಿಯಾಯಿತಿ ನೀಡುವುದಾಗಿ ಜೋಯಾಲುಕ್ಕಾಸ್ ಘೋಷಿಸಿದೆ. ಈ ಕೊಡುಗೆಯು ಸೋಮವಾರದವರೆಗೆ ಲಭ್ಯವಿರಲಿದೆ. ‘ನಮ್ಮ ಎಲ್ಲಾ ಷೋರೂಂಗಳು ಮತ್ತು ಜಾಲತಾಣದ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ತಿಳಿಸಿದೆ.

‘ಚಿನ್ನದ ದರ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಹಕರಿಗೆ ದೊಡ್ಡ ಉಳಿತಾಯದ ಕೊಡುಗೆ ಇದಾಗಿದೆ’ ಎಂದು ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜೋಯ್‌ ಅಲುಕ್ಕಾಸ್‌ ತಿಳಿಸಿದ್ದಾರೆ.

‘ವಜ್ರ ಮತ್ತು ಅತ್ಯಮೂಲ್ಯ ಚಿನ್ನಾಭರಣಗಳ ಮೇಲೆ ಶೇಕಡ 20ರಷ್ಟು ರಿಯಾಯಿತಿಯೂ ಸಿಗಲಿದೆ. ತಮ್ಮ ಹಳೆಯ ಚಿನ್ನವನ್ನು ಹೊಸದರೊಂದಿಗೆ ವಿನಿಮಯ ಮಾಡಿಕೊಳ್ಳಲು ಬಯಸುವವರಿಗೆ ಶೂನ್ಯ ಕಡಿತದೊಂದಿಗೆ ಚಿನ್ನ ವಿನಿಮಯವೂ ಲಭ್ಯವಿದೆ’ ಎಂದು ಅವರು ಹೇಳಿದ್ದಾರೆ.

‘ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಹೊಂದಿರುವವರು ಹೆಚ್ಚುವರಿಯಾಗಿ ಶೇ 5ರಷ್ಟು ಕ್ಯಾಷ್‌ಬ್ಯಾಕ್‌ ಮತ್ತು ಒಂದು ವರ್ಷದವರೆಗೆ ಉಚಿತ ವಿಮೆ, ಜೀವಿತಾವಧಿಯವರೆಗೆ ಉಚಿತ ನಿರ್ವಹಣೆ ಮತ್ತು ಬೈಬ್ಯಾಕ್‌ ಖಾತರಿ ಸಿಗಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು