ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Stock Market: ಮಂಗಳವಾರದಿಂದ ಜೆಎಸ್‌ಡಬ್ಲ್ಯು ಇನ್ಫ್ರಾ ಷೇರು ವಹಿವಾಟು

Published 2 ಅಕ್ಟೋಬರ್ 2023, 14:26 IST
Last Updated 2 ಅಕ್ಟೋಬರ್ 2023, 14:26 IST
ಅಕ್ಷರ ಗಾತ್ರ

ನವದೆಹಲಿ: ಜೆಎಸ್‌ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ನ ಷೇರುಗಳು ದೇಶದ ಷೇರುಪೇಟೆಗಳಲ್ಲಿ ಮಂಗಳವಾರದಿಂದ  ವಹಿವಾಟು ಆರಂಭಿಸಲಿವೆ.

ಸಾಲಪತ್ರಗಳ ‘ಬಿ’ ಸಮೂಹದಲ್ಲಿ ಕಂಪನಿಯ ಷೇರುಗಳು ವಹಿವಾಟು ನಡೆಸಲಿವೆ ಎಂದು ಮುಂಬೈ ಷೇರು ವಿನಿಮಯ ಕೇಂದ್ರವು (ಬಿಎಸ್‌ಇ) ಸೆಪ್ಟೆಂಬರ್‌ 29ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು ₹2,800 ಕೋಟಿ ಮೊತ್ತದ ಐಪಿಒ ಕಳೆದ ವಾರ ಮುಕ್ತಾಯವಾಗಿದೆ. ಆ ಬಳಿಕ ಷೇರುಪೇಟೆ ವಹಿವಾಟು ಆರಂಭ ಆದ ಎರಡು ದಿನಗಳ ಒಳಗಾಗಿಯೇ ಷೇರುಗಳು ಖರೀದಿಗೆ ಲಭ್ಯವಾಗುತ್ತಿವೆ.

ಐಪಿಒ ಮೂಲಕ ಸಂಗ್ರಹ ಆಗುವ ‌ಒಟ್ಟು ಮೊತ್ತದಲ್ಲಿ ಸಾಲ ಮರುಪಾವತಿಸಲು ₹880 ಕೋಟಿ, ಎಲ್‌ಪಿಜಿ ಟರ್ಮಿನಲ್‌ ಯೋಜನೆಗಾಗಿ ₹865.75 ಕೋಟಿ ಮತ್ತು ಎಲೆಕ್ಟ್ರಿಕ್‌ ಸಬ್‌ ಸ್ಟೇಷನ್‌ ನಿರ್ಮಾಣ ಮಾಡಲು ₹59.4 ಕೋಟಿ ಹಾಗೂ ಮಂಗಳೂರು ಕಂಟೈನರ್‌ ಟರ್ಮಿನಲ್‌ ವಿಸ್ತರಣೆಗಾಗಿ ₹151 ಕೋಟಿ ಬಳಸಲು ಉದ್ದೇಶಿಸಲಾಗಿದೆ ಎಂದು ಕಂಪನಿಯು ತಿಳಿಸಿದೆ.

ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿರ್ದಿಷ್ಟ ಕಂಪನಿಯ ಷೇರು, ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಳ್ಳಲು (ಲಿಸ್ಟಿಂಗ್‌) ಇದ್ದ ಆರು ದಿನಗಳ ಕಾಲಮಿತಿಯನ್ನು ಮೂರು ದಿನಗಳಿಗೆ ತಗ್ಗಿಸಲಾಗಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಆಗಸ್ಟ್‌ನಲ್ಲಿ ಈ ಬದಲಾವಣೆ ತಂದಿದೆ. ಸೆಪ್ಟೆಂಬರ್‌ 1 ಅಥವಾ ಆ ಬಳಿಕ ಐಪಿಒಗೆ ಬರುವ  ಕಂಪನಿಗಳಿಗೆ ಈ ಲಿಸ್ಟಿಂಗ್‌ ನಿಯಮವು ಐಚ್ಛಿಕ ಆಗಿರುತ್ತದೆ. ಡಿಸೆಂಬರ್‌ 1ರ ನಂತರ ಐಪಿಒಗೆ ಬರುವ ಕಂಪನಿಗಳಿಗೆ ಕಡ್ಡಾಯ ಆಗಿರಲಿದೆ ಎಂದು ಸೆಬಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT