ಕರ್ಣಾಟಕ ಬ್ಯಾಂಕ್ ‘ವಸೂಲಿ ಟೂಲ್‌’

ಭಾನುವಾರ, ಜೂಲೈ 21, 2019
21 °C

ಕರ್ಣಾಟಕ ಬ್ಯಾಂಕ್ ‘ವಸೂಲಿ ಟೂಲ್‌’

Published:
Updated:
Prajavani

ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಸಾಲ ವಸೂಲಾತಿ ಪ್ರಕ್ರಿಯೆ ಡಿಜಿಟಲೀಕರಣಗೊಳಿಸಲು ಹೊಸ ಅಂತರ್ಜಾಲ ಸಾಧನ ‘ವಸೂಲ್ ಸೋ ಎಫ್‍ಟಿ’ (ವಸೂಲ್ ಸೋ ಫಾಸ್ಟ್) ಆರಂಭಿಸಿದೆ.

‘ಸಾಲ ವಸೂಲಿ ಹಂತದಲ್ಲಿ ತಕ್ಷಣ ನಿರ್ಣಯ ಕೈಗೊಳ್ಳಲು ಹಾಗೂ ಸಮಯ ಉಳಿತಾಯ ಮಾಡಿಕೊಳ್ಳಲು ಹೊಸ ಸಾಧನ ನೆರವಾಗಲಿದೆ’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಅವರು ತಿಳಿಸಿದರು.

‘ಬ್ಯಾಂಕಿನ ಒಟ್ಟು ವಸೂಲಿ ಪ್ರಕ್ರಿಯೆಯಲ್ಲಿ ದಕ್ಷತೆ ಹೆಚ್ಚಿಸಲು ನೂತನ ವ್ಯವಸ್ಥೆ ಅನುಕೂಲ ಒದಗಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !