ಮುಂಬೈ: ಶ್ರೀಮಂತರಾಗಿದ್ದರೂ ಬ್ಯಾಂಕಿಂಗ್ ಸೇವೆಗಳು ‘ಸಂಪೂರ್ಣವಾಗಿ ದೊರೆತಿರದ’ ವರ್ಗಕ್ಕೆ ಕ್ರೆಡಿಟ್ ಕಾರ್ಡ್ ಮತ್ತು ಸಾಲ ಸೇವೆ ಒದಗಿಸುವ ಉದ್ದೇಶದಿಂದ ಕೋಟಕ್ ಮಹೀಂದ್ರ ಬ್ಯಾಂಕ್ ಹೊಸ ಯೋಜನೆಯೊಂದನ್ನು ಆರಂಭಿಸಿದೆ.

‘ಬ್ಯಾಂಕಿನ ಜೊತೆ ಒಟ್ಟು ₹75 ಲಕ್ಷಕ್ಕಿಂತ ಹೆಚ್ಚು ಹಾಗೂ ₹8 ಕೋಟಿವರೆಗಿನ ವಹಿವಾಟಿನ ಸಂಬಂಧವನ್ನು ಹೊಂದಿರುವ ಈ ವರ್ಗವು’ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ವರ್ಗಗಳಲ್ಲಿ ಒಂದಾಗಿದೆ. ಆದರೆ ಈ ವರ್ಗಕ್ಕೆ ಬ್ಯಾಂಕಿಂಗ್ ಸೇವೆಗಳು ‘ಹೆಚ್ಚಿನ ಮಟ್ಟದಲ್ಲಿ ಸಿಕ್ಕಿಲ್ಲ’ ಎಂದು ಬ್ಯಾಂಕ್ನ ಹಿರಿಯ ಅಧಿಕಾರಿ ರೋಹಿತ್ ಭಾಸಿನ್ ಹೇಳಿದ್ದಾರೆ.

ಕೋಟಕ್ ಮಹೀಂದ್ರ ಬ್ಯಾಂಕ್ನ ಒಟ್ಟು 5.3 ಕೋಟಿ ಗ್ರಾಹಕರ ಪೈಕಿ ಶೇ 1ಕ್ಕಿಂತ ಕಡಿಮೆ ಪ್ರಮಾಣದ ಗ್ರಾಹಕರು ಈ ವರ್ಗಕ್ಕೆ ಸೇರುತ್ತಾರೆ. ಆದರೆ ಬ್ಯಾಂಕ್ನ ಒಟ್ಟು ವಹಿವಾಟಿನಲ್ಲಿ ಶೇ 35ಕ್ಕಿಂತ ಹೆಚ್ಚಿನ ಕೊಡುಗೆ ಇವರದ್ದಿದೆ ಎಂದು ಅವರು ತಿಳಿಸಿದ್ದಾರೆ.

ಹೊಸ ಯೋಜನೆಯು ಎಲ್ಲರಿಗೂ ಮುಕ್ತವಲ್ಲ, ಇದು ಆಹ್ವಾನಿತರಿಗೆ ಮಾತ್ರ ಎಂದು ಬ್ಯಾಂಕ್ ಹೇಳಿದೆ. ಈ ಯೋಜನೆಯ ಅಡಿಯಲ್ಲಿ ಕ್ರೆಡಿಟ್ ಕಾರ್ಡ್, ವಿಶೇಷವಾದ ಸಾಲ ಸೌಲಭ್ಯಗಳನ್ನು ಬ್ಯಾಂಕ್ ಒದಗಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.