‘ಪಂಚಾಯತ್ ಪತಿ’ ಬದಲಾಗಬೇಕು’
‘ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಪರವಾಗಿ ಅವರ ಪತಿ ಅಧಿಕಾರವನ್ನು ನಡೆಸುತ್ತಿದ್ದು ‘ಪಂಚಾಯತ್ ಪತಿ’ಗಳಾಗಿದ್ದಾರೆ. ಇಂತಹ ಸ್ಥಿತಿ ದೂರಾಗಬೇಕಿದೆ. ಕಾನೂನಿನಲ್ಲಾಗಿರುವ ಬದಲಾವಣೆ ಸ್ಥಳೀಯ ಮಟ್ಟದಲ್ಲೂ ವಾಸ್ತವಕ್ಕೆ ಬರಬೇಕು. ಮಹಿಳೆಯರು ಅಧಿಕಾರ ನಡೆಸಬೇಕು’ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದರು. ‘ಸಂವಿಧಾನಕ್ಕೆ ತಿದ್ದುಪಡಿ ತಂದು ಜಾರಿಯಾಗಿರುವ ಪಂಚಾಯತ್ ರಾಜ್‌ನಿಂದಾಗಿ ಅಧಿಕಾರ ವಿಕೇಂದ್ರೀಕರಣಗೊಂಡು ನಾಗರಿಕರಿಗೆ ಆಡಳಿತ ಹತ್ತಿರವಾಗುತ್ತಿದೆ. ಇದು ಉತ್ತಮ ಆಡಳಿತಕ್ಕೆ ಒಂದು ಮೈಲುಗಲ್ಲು. ಇದು ಸ್ಥಳೀಯ ಜನರ ಭಾಗವಹಿಸುವಿಕೆಗೆ ದಾರಿ ಮಾಡಿಕೊಟ್ಟಿದ್ದು ಕ್ಷಿಪ್ರ ಕಾಮಗಾರಿಗಳನ್ನು ನಡೆಸಲು ಅವಕಾಶ ಕಲ್ಪಿಸಿದೆ. ಆದರೆ ಇವೆಲ್ಲ ಅವಕಾಶಗಳು ಕಾಗದದಲ್ಲಿ ಲಭ್ಯವಿದ್ದರೂ ಸ್ಥಳೀಯ ಸಂಸ್ಥೆಗಳ ವಾಸ್ತವ ಚಿತ್ರಣವೇ ಬೇರೆಯದ್ದಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಆದರೆ ಮಹಿಳೆಯ ಪತಿ ಅಧಿಕಾರವನ್ನು ನಡೆಸುತ್ತಿದ್ದಾರೆ. ಬಿಹಾರದಲ್ಲಿ ಪತ್ನಿ ಬದಲಾಗಿ ಪತಿಯೇ ಅಧಿಕಾರ ನಡೆಸಿದರು’ ಎಂದರು.