ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆವಿಜಿ ಬ್ಯಾಂಕ್ ಲಾಭ ₹330 ಕೋಟಿ

Last Updated 1 ಜೂನ್ 2022, 12:52 IST
ಅಕ್ಷರ ಗಾತ್ರ

ಧಾರವಾಡ: ‘ಕೋವಿಡ್ 2 ಮತ್ತು 3ನೇ ಅಲೆಯ ಸಂಕಷ್ಟದ ಪರಿಸ್ಥಿತಿಯಲ್ಲೂ ಕೆನರಾ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶೇ 10.53 ಪ್ರಗತಿಯೊಂದಿಗೆ ₹30,748 ಕೋಟಿ ಒಟ್ಟಾರೆ ವಹಿವಾಟು ನಡೆಸಿದೆ. ಅದರ ಮೂಲಕ ₹330.19ಕೋಟಿ ಲಾಭ ಗಳಿಸಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಪಿ. ಗೋಪಿಕೃಷ್ಣ ಹೇಳಿದರು.

‘ಬ್ಯಾಂಕಿನ ನಿವ್ವಳ ಸಂಪತ್ತು ₹1224.42 ಕೋಟಿಗಳಿಗೆ ವೃದ್ಧಿಸಿದೆ. 2020–21ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟ ವ್ಯವಹಾರ ₹27,818ಕೋಟಿ ಆಗಿತ್ತು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಉತ್ತರ ಕರ್ನಾಟಕ ಒಂಭತ್ತು ಜಿಲ್ಲೆಯಲ್ಲಿ 629 ಶಾಖೆಗಳನ್ನು ಹೊಂದಿರುವ ಕೆವಿಜಿ ಬ್ಯಾಂಕ್ ಈವರೆಗೂ ಕೃಷಿ ರಂಗಕ್ಕೆ ₹8690 ಕೋಟಿ ನೀಡಿದೆ. ಹಾಗೆಯೇ ಒಂದು ಬಾರಿ ಪಾವತಿ (ಒಟಿಎಸ್) ಯೋಜನೆ ಜಾರಿಯಿಂದಾಗಿ ಅನುತ್ಪಾದಕ ಸಾಲದ ಪ್ರಮಾಣ ಶೇ 9.56ರಿಂದ ಶೇ 5.90ಕ್ಕೆ ಕುಸಿದಿದೆ. ಹಾಗೆಯೇಠೇವಣಿ ಸಂಗ್ರಹಣೆಯಲ್ಲಿ ಶೇ 9.60ರ ದರದಲ್ಲಿ ₹17,647 ಕೋಟಿ ತಲುಪಿದೆ. ಗ್ರಾಹಕರ ಸಂಖ್ಯೆಯೂ 81ಲಕ್ಷ ದಾಟಿದೆ’ ಎಂದು ವಿವರಿಸಿದರು.

‘ಬ್ಯಾಂಕಿನ ಈ ವರ್ಷದ ಲಾಭದಲ್ಲಿ ಒಂದಷ್ಟು ಭಾಗವನ್ನು ವಿಕಾಸ ಸಿರಿ ಸಂಪತ್ತು ಎಂಬ ಠೇವಣಿಗೆ ಶೇ 5.7ರಷ್ಟು ಗರಿಷ್ಠ ಬಡ್ಡಿ ನೀಡುವ ಮೂಲಕ ಗ್ರಾಹಕರಿಗೆ ಮರಳಿಸಲಾಗುತ್ತಿದೆ. ಹಾಗೆಯೇ 2022–23ನೇ ಸಾಲಿಗೆ ಬ್ಯಾಂಕ್‌ನ ವಹಿವಾಟನ್ನು ₹33000 ಕೋಟಿಗೆ ಹೆಚ್ಚಿಸಲು ಹಾಗೂ ₹9150ಕೋಟಿ ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ. ಜತೆಗೆ ಹಲವು ಸಾಮಾಜಿಕ ಕಾರ್ಯಗಳಿಗೂ ಬ್ಯಾಂಕ್‌ ಹಣ ವಿನಿಯೋಗಿಸುತ್ತಿದೆ’ ಎಂದು ಗೋಪಿಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT