ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌ ಖಾತೆಗೆ ಶೇ 8.5ರಷ್ಟು ಬಡ್ಡಿ ಪಾವತಿ ಆರಂಭ

Last Updated 31 ಡಿಸೆಂಬರ್ 2020, 12:52 IST
ಅಕ್ಷರ ಗಾತ್ರ

ನವದೆಹಲಿ: ‘ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಖಾತೆಗೆ2019–20ನೇ ಸಾಲಿಗೆ ಶೇಕಡ 8.5ರಷ್ಟು ಬಡ್ಡಿ ಪಾವತಿಸುವ ಪ್ರಕ್ರಿಯೆ ಆರಂಭವಾಗಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್‌ ತಿಳಿಸಿದ್ದಾರೆ.

ಗುರುವಾರ (ಡಿಸೆಂಬರ್‌ 31ರಂದು) ನಿವೃತ್ತಿ ಆಗಲಿರುವ ಸದಸ್ಯರಿಗೂ 2019–20ನೇ ಸಾಲಿಗೆ ಶೇ 8.5ರಷ್ಟು ಬಡ್ಡಿದರ ಸಿಗುವಂತೆ ನೋಡಿಕೊಳ್ಳಲು ಸೂಚನೆ ನೀಡಿರುವುದಾಗಿ ಅವರು ಹೇಳಿದ್ದಾರೆ.

6 ಕೋಟಿಗೂ ಅಧಿಕ ಪಿಎಫ್‌ ಸದಸ್ಯರಿಗೆ ಇದರಿಂದ ಪ್ರಯೋಜನ ಆಗಲಿದೆ. ಹಣಕಾಸು ಸಚಿವಾಲಯದ ಒಪ್ಪಿಗೆಯ ಮೇರೆಗೆ ಗಂಗ್ವಾರ್‌ ಅವರು ಈ ಬಡ್ಡಿದರವನ್ನು ಪಾವತಿಸಲು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT