ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಎಲ್‌ಇಡಿ ಬಲ್ಬ್‌ ಬೆಲೆ ಹೆಚ್ಚಳ ಸಾಧ್ಯತೆ

Last Updated 7 ಫೆಬ್ರುವರಿ 2021, 11:02 IST
ಅಕ್ಷರ ಗಾತ್ರ

ನವದೆಹಲಿ: ಎಲ್‌ಇಡಿ ಬಲ್ಬ್‌ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಆಮದು ಸುಂಕವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬಲ್ಬ್‌ಗಳ ಬೆಲೆಯಲ್ಲಿ ಶೇಕಡ 5ರಿಂದ ಶೇ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

‘ಎಲ್‌ಇಡಿ ಬಲ್ಪ್ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಮೇಲಿನ ಸುಂಕ ಹೆಚ್ಚಿಸುವ ಸರ್ಕಾರದ ತೀರ್ಮಾನದಿಂದಾಗಿ, ಬಲ್ಬ್‌ ಬೆಲೆಯಲ್ಲಿ ಹೆಚ್ಚಳ ಆಗಲಿದೆ. ಬಲ್ಬ್ ತಯಾರಿಕೆಗೆ ಬೇಕಾಗುವ ಬಹುತೇಕ ವಸ್ತುಗಳು ಈಗಲೂ ವಿದೇಶಗಳಿಂದ ಆಮದಾಗುತ್ತಿವೆ’ ಎಂದು ಎಲೆಕ್ಟ್ರಿಕ್ ಲ್ಯಾಂಪ್ ಮತ್ತು ಬಿಡಿಭಾಗ ತಯಾರಕರ ಸಂಘದ ಅಧ್ಯಕ್ಷ ಸುಮಿತ್ ಜೋಷಿ ತಿಳಿಸಿದರು.

‘ಎಲ್‌ಇಡಿ ಬಲ್ಬ್‌ ತಯಾರಿಕೆಗೆ ಬೇಕಿರುವ ಕೆಲವು ಎಲೆಕ್ಟ್ರಾನಿಕ್ಸ್ ವಸ್ತುಗಳ ಸ್ಥಳೀಯ ಉತ್ಪಾದನೆ ಇಲ್ಲವಾಗಿರುವ ಕಾರಣ, ಚೀನಾ, ದಕ್ಷಿಣ ಕೊರಿಯಾ, ವಿಯೆಟ್ನಾಂಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದು ಹಾವೆಲ್ಸ್ ಇಂಡಿಯಾ ಕಂಪನಿಯ ಹಿರಿಯ ಉಪಾಧ್ಯಕ್ಷ ಪರಾಗ್ ಭಟ್ನಾಗರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT