66ನೇ ವರ್ಷಕ್ಕೆ ಕಾಲಿರಿಸಿದ ಎಲ್‌ಐಸಿ

ಬೆಂಗಳೂರು: ದೇಶದ ಅತಿದೊಡ್ಡ ಜೀವ ವಿಮಾ ಕಂಪನಿಯಾಗಿರುವ ‘ಭಾರತೀಯ ಜೀವ ವಿಮಾ ನಿಗಮ’ವು (ಎಲ್‌ಐಸಿ) ಬುಧವಾರಕ್ಕೆ (ಸೆಪ್ಟೆಂಬರ್ 1) 65 ವರ್ಷಗಳನ್ನು ಪೂರೈಸಿ, 66ನೆಯ ವರ್ಷಕ್ಕೆ ಕಾಲಿಟ್ಟಿದೆ. ‘ಬ್ರ್ಯಾಂಡ್ ಫೈನಾನ್ಸ್ ಇನ್ಶುರೆನ್ಸ್ 100’ ಸಮೀಕ್ಷೆಯ ಪ್ರಕಾರ ಎಲ್‌ಐಸಿ ವಿಶ್ವದಲ್ಲಿ ಮೂರನೆಯ ಅತ್ಯಂತ ಬಲಿಷ್ಠ, 10ನೆಯ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಆಗಿದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.
1956ರಲ್ಲಿ ₹ 5 ಕೋಟಿ ಬಂಡವಾಳದೊಂದಿಗೆ ಆರಂಭವಾದ ಎಲ್‌ಐಸಿ ಇಂದು ದೇಶದ ವಿಮಾ ವಲಯದಲ್ಲಿ ಮೊದಲ ಸ್ಥಾನದಲ್ಲಿದೆ. 2020–21ನೆಯ ಸಾಲಿನಲ್ಲಿ ಕಂಪನಿಯು 2.10 ಕೋಟಿ ವಿಮೆಗಳನ್ನು ಮಾರಾಟ ಮಾಡಿದೆ. ಕಂಪನಿಯು ಈಗ 14 ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಒಂದು ಲಕ್ಷಕ್ಕಿಂತ ಹೆಚ್ಚಿನ ನೌಕರರು, 13.53 ಲಕ್ಷಕ್ಕಿಂತ ಹೆಚ್ಚಿನ ಏಜೆಂಟರು ಇರುವ ಕಂಪನಿಯು ವಿಮಾ ಗ್ರಾಹಕರ ಹಣವನ್ನು ಸಮುದಾಯದ ಒಳಿತಿಗಾಗಿಯೂ, ಗ್ರಾಹಕರಿಗೆ ಒಳ್ಳೆಯ ಲಾಭ ಬರುವಲ್ಲಿಯೂ ಹೂಡಿಕೆ ಮಾಡುತ್ತಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.