ಜನವರಿಗೂ ಮೊದಲು ಎಲ್‌ಐಸಿ ಐಪಿಒ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳನ್ನು ಜನವರಿಗೂ ಮೊದಲೇ ಸಾರ್ವಜನಿಕರಿಗೆ ಖರೀದಿಗೆ (ಐಪಿಒ) ಮುಕ್ತವಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಭಾಗವಾಗಿ, ಎಲ್‌ಐಸಿ ಷೇರು ವಿಕ್ರಯವನ್ನು ನಿರ್ವಹಿಸಲು ಮರ್ಚೆಂಟ್ ಬ್ಯಾಂಕರ್‌ಗಳಿಂದ ಈ ತಿಂಗಳಿನಲ್ಲಿ ಬಿಡ್ ಆಹ್ವಾನಿಸುವ ಸಾಧ್ಯತೆ ಇದೆ.
ಐಪಿಒಗೂ ಮುನ್ನ ಎಲ್‌ಐಸಿಯ ಮೌಲ್ಯವನ್ನು ನಿರ್ಣಯಿಸಲು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಯು (ಡಿಐಪಿಎಎಂ) ಮಿಲಿಮನ್ ಅಡ್ವೈಸರ್ಸ್ ಎಲ್‌ಎಲ್‌ಪಿ ಇಂಡಿಯಾ ಕಂಪನಿಯನ್ನು ನೇಮಕ ಮಾಡಿದೆ. ಈ ಕಂಪನಿಯು ಮುಂದಿನ ಕೆಲವೇ ವಾರಗಳಲ್ಲಿ ಎಲ್‌ಐಸಿಯ ಮೌಲ್ಯವನ್ನು ನಿರ್ಣಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಷೇರುವಿಕ್ರಯ ಗುರಿ ತಲುಪಲು ಎಲ್‌ಐಸಿಯ ಐಪಿಒ ಕೇಂದ್ರ ಸರ್ಕಾರಕ್ಕೆ ಬಹಳ ಮುಖ್ಯವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ಮಾರಾಟ ಮತ್ತು ಖಾಸಗೀಕರಣದಿಂದ ಒಟ್ಟಾರೆ ₹ 1.75 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.