ಸೋಮವಾರ, ನವೆಂಬರ್ 29, 2021
20 °C

ಏಜೆಂಟ್‌ಗಳಿಗೆ ‘ಆನಂದ’ ಆ್ಯಪ್‌ ಬಿಡುಗಡೆ ಮಾಡಿದ ಎಲ್‌ಐಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು ತನ್ನ ಹೊಸ ವಹಿವಾಟನ್ನು ಡಿಜಿಟಲೀಕರಣಗೊಳಿಸುವ ಭಾಗವಾಗಿ ಏಜೆಂಟ್‌ಗಳು ಮತ್ತು ಮಧ್ಯವರ್ತಿಗಳಿಗೆ ‘ಆತ್ಮನಿರ್ಭರ ಭಾರತ ನ್ಯೂ ಬಿಸಿನೆಸ್‌ ಡಿಜಿಟಲ್‌ ಅಪ್ಲಿಕೇಷನ್‌’ (ಆನಂದ ಆ್ಯಪ್‌) ಬಿಡುಗಡೆ ಮಾಡಿದೆ.

ಈ ಆ್ಯಪ್‌ಅನ್ನು ಏಜೆಂಟ್‌ಗಳು, ಮಧ್ಯವರ್ತಿಗಳು ಬಳಸುವುದು ಹೆಚ್ಚಲಿದೆ ಎಂಬ ನಿರೀಕ್ಷೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಎಲ್‌ಐಸಿಯ ಅಧ್ಯಕ್ಷ ಎಂ.ಆರ್‌. ಕುಮಾರ್‌ ಅವರು ಆ್ಯಪ್‌ ಅನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಏಜೆಂಟ್‌ಗಳಿಗಾಗಿ ಇ-ತರಬೇತಿ ವೀಡಿಯೊ ಬಿಡುಗಡೆ ಮಾಡಲಾಯಿತು. ಮೊಬೈಲ್ ಆ್ಯಪ್‌ನ ಪ್ರಮುಖ ಲಕ್ಷಣಗಳನ್ನು ಮತ್ತು ಜೀವವಿಮಾ ಪಾಲಿಸಿಯನ್ನು ಪೂರ್ಣಗೊಳಿಸುವ ಪ್ರಕ್ರಿಯೆಯ ಮಾಹಿತಿಯು ಈ ವಿಡಿಯೊದಲ್ಲಿದೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು