ಬುಧವಾರ, ಡಿಸೆಂಬರ್ 8, 2021
18 °C

ಎಲ್‌ಐಸಿಯಿಂದ ‘ಪ್ರಗತಿ’ ಆ್ಯಪ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ಡೆವಲಪ್‌ಮೆಂಟ್‌ ಆಫಿಸರ್‌ಗಳಿಗಾಗಿ ಪ್ರಗತಿ ಆ್ಯಪ್ (ಪರ್ಫಾರ್ಮೆನ್ಸ್‌ ರಿವ್ಯು ಅಪ್ಲಿಕೇಷನ್‌, ಗ್ರೋತ್‌ ಆ್ಯಂಡ್‌ ಟ್ರೆಂಡ್‌ ಇಂಡಿಕೇಟರ್‌) ಬಿಡುಗಡೆ ಮಾಡಿದೆ.

ಕಂತು ಸಂಗ್ರಹ ಮತ್ತು ಏಜೆನ್ಸಿ ಸಕ್ರಿಯಗೊಳಿಸುವಿಕೆ ಸೇರಿದಂತೆ ಇನ್ನೂ ಹಲವು ಮಾಹಿತಿಗಳನ್ನು ಈ ಆ್ಯಪ್‌ ಒದಗಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಎಲ್‌ಐಸಿ’ಯು ತನ್ನ ಗ್ರಾಹಕರ ಅನುಕೂಲಕ್ಕಾಗಿ ಹಲವು ಗ್ರಾಹಕ ಕೇಂದ್ರಿತ ಕ್ರಮಗಳನ್ನು ಹಾಗೂ ಅಧಿಕಾರಿಗಳ ಕೆಲಸಗಳನ್ನು ಸುಲಭಗೊಳಿಸಲು ಡಿಜಿಟಲ್ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು