ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರಿ ಹುಡುಕಲು ಸಹಕರಿಸುವ ‘ಲಿಂಕ್ಡ್‌ಇನ್‌‘ನಲ್ಲೂ ಉದ್ಯೋಗ ಕಡಿತ

ಮೈಕ್ರೋಸಾಫ್ಟ್‌ ಒಡೆತನದ ಲಿಂಕ್ಡ್‌ಇನ್‌
Last Updated 14 ಫೆಬ್ರುವರಿ 2023, 10:47 IST
ಅಕ್ಷರ ಗಾತ್ರ

ಕೆಲಸ ಹುಡುಕಲು ಯುವಜನತೆ ನೆಚ್ಚಿಕೊಂಡಿರುವ ಮೈಕ್ರೋಸಾಫ್ಟ್‌ ಒಡೆತನದ ‘ಲಿಂಕ್ಡ್‌ ಇನ್‌‘ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.

ಸುಮಾರು 10,000 ಉದ್ಯೋಗ ಕಡಿತ ಮಾಡುವ ತನ್ನ ನಿರ್ಧಾರದ ಭಾಗವಾಗಿ, ಲಿಂಕ್ಡ್‌ಇನ್‌ನ ನೌಕರರನ್ನೂ ಮನೆಗೆ ಕಳುಹಿಸಲು ಮೈಕ್ರೋಸಾಫ್ಟ್‌ ಮುಂದಾಗಿದೆ.

ಎಷ್ಟು ಮಂದಿಯನ್ನು ವಜಾ ಮಾಡಲಾಗುತ್ತದೆ ಎನ್ನುವ ನಿಖರ ಮಾಹಿತಿ ಇಲ್ಲದಿದ್ದರೂ, ನೇಮಕಾತಿ ವಿಭಾಗದಿಂದ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭಿಸಿದೆ.

ಕಳೆದ ವಾರ ಮೈಕ್ರೋಸಾಫ್ಟ್‌ ಒಡೆತನದ ಹೋಲೋಲೆನ್ಸ್‌ ಹಾಗೂ ಎಕ್ಸ್‌ಬಾಕ್ಸ್‌ ಕೂಡ ಹಲವು ಉದ್ಯೋಗಿಗಳನ್ನು ವಜಾ ಮಾಡಿತ್ತು.

ನಿರೀಕ್ಷಿತ ಆರ್ಥಿಕ ಹಿಂಜರಿತದಿಂದಾಗಿ ಐಟಿ ಕಂಪನಿಗಳು ಭಾ‌ರೀ ಪ್ರಮಾಣದಲ್ಲಿ ನೌಕರರನ್ನು ಮನೆಗೆ ಕಳುಹಿಸುತ್ತಿವೆ.

ಇನ್ನು ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಘೋಷಣೆ ಬೆನ್ನಲ್ಲೇ, ಹಲವು ಮಂದಿ ಕೆಲಸ ಕಳೆದುಕೊಂಡಿದ್ದಾಗಿ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

ಉದ್ಯೋಗ ಆಕಾಂಕ್ಷಿಗಳು ಹಾಗೂ ಕಂಪನಿಗಳ ನಡುವೆ ಮಧ್ಯವರ್ತಿ ರೂಪದಲ್ಲಿ ಲಿಂಕ್ಡ್‌ಇನ್‌ ಕೆಲಸ ನಿರ್ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT