ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಳ್ಯದೆಲೆ ಕೃಷಿಕರ ಬವಣೆ | ಎರಡು ತಿಂಗಳಿಂದ ಕೊಯ್ಲು ಇಲ್ಲ, ಖರೀದಿದಾರರ ಸುಳಿವಿಲ್ಲ

Last Updated 25 ಏಪ್ರಿಲ್ 2020, 19:56 IST
ಅಕ್ಷರ ಗಾತ್ರ

ಕೊಲ್ಹಾರ (ವಿಜಯಪುರ): ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ವೀಳ್ಯದೆಲೆ ಬೆಳೆಗಾರರು ಹಾಗೂ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ವೀಳ್ಯದೆಲೆ ತವರೂರೆಂದೇ ಕರೆಸಿಕೊಳ್ಳುವ ಕೂಡಗಿ, ಕಲಗುರ್ಕಿ, ತಳೇವಾಡ, ಮಸೂತಿ, ಮಲಘಾಣ, ಆಸಂಗಿ, ಮುತ್ತಗಿ, ಗೊಳಸಂಗಿ ಸೇರಿ ವಿವಿಧ ಗ್ರಾಮಗಳಲ್ಲಿ 300-350 ಎಕರೆಯಲ್ಲಿ ಎಲೆ ಬಳ್ಳಿ ಬೆಳೆದಿದ್ದಾರೆ.

ಅಂದಾಜು 250ಕ್ಕೂ ಹೆಚ್ಚು ಕೃಷಿಕರು ವೀಳ್ಯದೆಲೆ ಬೆಳೆದಿದ್ದಾರೆ. ಇದು, ವರ್ಷವಿಡೀ ಪ್ರತಿ 15-20 ದಿನಗಳಿಗೊಮ್ಮೆ ಕಟಾವಿಗೆ ಬರುವ ದೀರ್ಘಾವಧಿ ಬೆಳೆ. ವಾರ್ಷಿಕ ಸರಾಸರಿ ₹ 3 ಲಕ್ಷದಿಂದ ₹4 ಲಕ್ಷ ಆದಾಯ ಬರುತ್ತದೆ.

‘ಎರಡು ತಿಂಗಳಿಂದ ಬೇಡಿಕೆ ಕುಸಿದಿದೆ. ಕೊಯ್ಲು ಮಾಡಿಲ್ಲ. ಎಲೆಗಳು ಒಣಗುತ್ತಿವೆ. ಖರೀದಿದಾರರೂ ಬರುತ್ತಿಲ್ಲ. ದಿಕ್ಕು ತೋಚದಂತಾಗಿದೆ’ ಎಂದು ಕೂಡಗಿಯ ಬೆಳೆಗಾರ ಚಂದ್ರಶೇಖರ ಜುಗತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇತ್ತ ಎಲೆ ವ್ಯಾಪಾರವನ್ನೇ ಅವಲಂಬಿಸಿದ್ದ ಈ ಭಾಗದ 70 ಕ್ಕೂ ಹೆಚ್ಚು ಖರೀದಿದಾರರು ಹಾಗೂ 300ಕ್ಕೂ ಅಧಿಕ ಕೃಷಿ ಕೂಲಿಕಾರ್ಮಿಕರ ಆದಾಯದ ಮೇಲೂ ಇದರ ಪರಿಣಾಮ ಉಂಟಾಗಿದೆ.

‘ಇಲ್ಲಿನ ವೀಳ್ಯದೆಲೆಗಳನ್ನು ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಈಗ ಲಾಕ್‌ಡೌನ್‌ನಿಂದಾಗಿ ಹೊಡೆತ ಬಿದ್ದಿದೆ‘ ಎಂದು ಖರೀದಿದಾರ ನೂರ್ ಖಾನ್ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT