ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಸಮುದ್ರದಲ್ಲಿ ಸಾಗಣೆ ತೊಡಕು: ಗ್ರಾಹಕರಿಗೆ ಪೆಟ್ಟು

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ಹುಥಿ ಬಂಡುಕೋರರು ನಡೆಸುತ್ತಿರುವ ದಾಳಿಯು ಜಾಗತಿಕ ವಾಣಿಜ್ಯ ವಹಿವಾಟನ್ನು ಬಾಧಿಸುತ್ತಲೇ ಇದೆ. ಇಂತಹ ದಾಳಿಗಳು ಇನ್ನೂ ಮುಂದುವರಿದರೆ ಜಾಗತಿಕ ಮಟ್ಟದಲ್ಲಿ ಕೈಗಾರಿಕೋದ್ಯಮಗಳ ಕಾರ್ಯಾಚರಣೆಗೆ ತೊಡಕಾಗಲಿದೆ. ಇದರ ಪರಿಣಾಮವನ್ನು ಗ್ರಾಹಕರೇ ಎದುರಿಸಬೇಕಾಗುತ್ತದೆ ಎಂದು ‘ಗ್ಲೋಬಲ್‌ ಟ್ರೇಡ್‌ ರಿಸರ್ಚ್‌ ಇನಿಷಿಯೇಟಿವ್‌’ ಹೇಳಿದೆ. ಉದ್ಯಮ ವಲಯ, ರಫ್ತು ತಜ್ಞರು, ಸರ್ಕಾರಿ ಸಂಸ್ಥೆಗಳೂ ಈ ಮಾತನ್ನೇ ಹೇಳುತ್ತವೆ.

* ಹಡಗುಗಳು ಕೆಂಪು ಸಮುದ್ರ ಮಾರ್ಗವನ್ನು ತೊರೆದು, ಆಫ್ರಿಕಾವನ್ನು ಬಳಸಿಕೊಂಡು ಏಷ್ಯಾದತ್ತ ಬರುತ್ತಿವೆ. ಈ ಯಾನ ದೀರ್ಘವಾಗುತ್ತಿರುವ ಕಾರಣ, ಕೈಗಾರಿಕೆಗಳಿಗೆ ಕಚ್ಚಾವಸ್ತುಗಳು ಮತ್ತು ಬಿಡಿಭಾಗಗಳ ಪೂರೈಕೆಯಲ್ಲಿ ಭಾರಿ ವಿಳಂಬವಾಗುತ್ತಿದೆ. ಇದು ಮುಂದುವರಿದರೆ, ಕೆಲವು ಕೈಗಾರಿಕೆಗಳು ತಾತ್ಕಾಲಿಕವಾಗಿ ತಯಾರಿಕೆ ಸ್ಥಗಿತಗೊಳಿಸಬೇಕಾಗುತ್ತದೆ

* ಎಲೆಕ್ಟ್ರಾನಿಕ್ಸ್‌, ಆಟೊಮೊಬೈಲ್, ಯಂತ್ರೋಪಕರಣಗಳು, ರಾಸಾಯನಿಕಗಳು, ಔಷಧ, ಪಾಲಿಮರ್‌, ಜವಳಿ ಕ್ಷೇತ್ರದ ಉದ್ಯಮಗಳು ಈ ವಿಳಂಬಕ್ಕೆ ಗುರಿಯಾಗಲಿವೆ

* ಭಾರತದಿಂದ ಪಾಶ್ಚಿಮಾತ್ಯ ದೇಶಗಳಿಗೆ ಆಗಬೇಕಿದ್ದ ರಫ್ತು ಕೂಡ ಭಾದಿತವಾಗಿದೆ. ಆಫ್ರಿಕಾವನ್ನು ಸುತ್ತುಹಾಕಿ ಐರೋಪ್ಯ ದೇಶಗಳತ್ತ ಹೋಗಬೇಕಿರುವ ಕಾರಣ, ರಫ್ತು ವೆಚ್ಚದಲ್ಲಿ ಶೇ 250–265ರಷ್ಟು ಏರಿಕೆಯಾಗಿದೆ. ಇದರ ಪರಿಣಾಮವಾಗಿ ರಫ್ತು ಪ್ರಮಾಣ ಇಳಿಕೆಯಾಗುತ್ತಿದೆ

* ಭಾರತದ ಒಟ್ಟು ಆಮದಿನಲ್ಲಿ ಶೇ 30ರಷ್ಟು ಸರಕುಗಳು ಕೆಂಪು ಸಮುದ್ರ ಮಾರ್ಗದ ಮೂಲಕವೇ ಬರುತ್ತದೆ. ಭಾರತದ ಒಟ್ಟು ರಫ್ತಿನಲ್ಲಿ ಶೇ 50ರಷ್ಟು ಸರಕುಗಳು ಈ ಮಾರ್ಗದ ಮೂಲಕವೇ ರವಾನೆಯಾಗುತ್ತವೆ. ಆದರೆ ಈಗ ಈ ಪ್ರಮಾಣ ಗಣನೀಯ ಮಟ್ಟದಲ್ಲಿ ಇಳಿಕೆಯಾಗಿದೆ

* ರಷ್ಯಾದಿಂದ ಭಾರತಕ್ಕೆ ಆಮದಾಗುತ್ತಿರುವ ಕಚ್ಚಾತೈಲವು ಕೆಂಪು ಸಮುದ್ರದ ಮೂಲಕವೇ ಬರಬೇಕಿತ್ತು. ಆದರೆ ಈಗ ಆಫ್ರಿಕಾವನ್ನು ಸುತ್ತಿಕೊಂಡು ಬರುತ್ತಿರುವ ಕಾರಣ, ಪೂರೈಕೆಯಲ್ಲಿ
ವಿಳಂಬವಾಗುತ್ತಿದೆ. ಜತೆಗೆ, ಸಾಗಣೆ ವೆಚ್ಚವೂ ಏರಿಕೆಯಾಗುತ್ತಿದೆ. ಆದರೆ, ದೇಶದ ಇಂಧನ ಬೇಡಿಕೆ ಪೂರೈಕೆಯಲ್ಲಿ ಯಾವುದೇ ಅಡೆತಡೆಯಾಗುವುದಿಲ್ಲ. ಈ ಮಾರ್ಗದ ಮೂಲಕ ಬರುವ ಕಚ್ಚಾತೈಲದ ಪ್ರಮಾಣ ಕಡಿಮೆ ಇರುವ ಕಾರಣ ದೇಶದ ಇಂಧನ ಬೆಲೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ

ಸದ್ಯ ನಾವು ವಿದೇಶಿ ಶಿಪ್ಪಿಂಗ್‌ ಕಂಪನಿಗಳ ಮೇಲೆ ಅವಲಂಬಿತರಾಗಿದ್ದೇವೆ. ಆದ್ದರಿಂದ, ಭಾರತವು ತನ್ನದೇ ಆದ ಶಿಪ್ಪಿಂಗ್‌ ಕಂಪನಿಯನ್ನು ಆರಂಭಿಸಲು ಇದು ಸಕಾಲ.
-ಎಸ್‌.ಕೆ. ಸರಾಫ್‌, ರಫ್ತುದಾರ, ಮುಂಬೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT