ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ಹೊಸ ಔಡಿ ಎ6 ಕಾರ್‌ ಬಿಡುಗಡೆ

Last Updated 24 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಔಡಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಅವರು ಗುರು
ವಾರ ಇಲ್ಲಿ ಹೊಸ ಔಡಿ ಎ6 ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ವರ್ಲಿಯಲ್ಲಿನ ಫೇಮಸ್ ಸ್ಟುಡಿಯೋಸ್‌ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಅವರು ಕಂಪನಿಯ ಬೆಳವಣಿಗೆ ಮತ್ತು ಹೊಸ ಕಾರಿನ ಬಗ್ಗೆ ಮಾಹಿತಿ ನೀಡಿದರು.

‘ಎ6 ಮೂಲಕ ಎಂಟನೇ ಪೀಳಿಗೆಯ ಪೂರ್ಣ ಪ್ರಮಾಣದ ಸೆಡಾನ್ ನೀಡಿದ್ದೇವೆ. ಐಷಾರಾಮ ಮತ್ತು ತಂತ್ರಜ್ಞಾನದಲ್ಲಿ ಇದು ಅತ್ಯುತ್ತಮವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಿಶ್ವಾಸವಿದೆ’ ಎಂದರು.

‘2012ರಲ್ಲಿ ನಾನು ಮೊದಲ ಬಾರಿಗೆ ಔಡಿ ಕಾರ್‌ ಖರೀದಿಸಿದ್ದೆ. ಅಲ್ಲಿಂದ ಔಡಿ ಜತೆಗಿನ ನನ್ನ ಸಂಬಂಧ ಬಲಗೊಳ್ಳುತ್ತಾ ಬಂದಿದೆ. ಇದು ಐಷಾರಾಮಿ ಮತ್ತು ಸ್ಪೋರ್ಟ್ಸ್ ಲುಕ್ ಹೊಂದಿರುವ ವಿಶಿಷ್ಟ ಕಾರ್ ಆಗಿದೆ. ಹೀಗಾಗಿ ಈ ಕಾರನ್ನು ಚಲಾಯಿಸುವುದು ಹೆಚ್ಚಿನ ರೋಮಾಂಚನದ ಅನುಭವ ನೀಡುತ್ತದೆ’ ಎಂದು ವಿರಾಟ್ ಕೊಹ್ಲಿ ಅವರು ತಮ್ಮ ಅನುಭವ ಹಂಚಿಕೊಂಡರು.

‘ರಾಷ್ಟ್ರೀಯ ಹೆದ್ದಾರಿ ಮತ್ತು ವಾಹನಗಳ ದಟ್ಟಣೆ ಪ್ರಮಾಣ ಕಡಿಮೆ ಇರುವ ಕಡೆಗಳಲ್ಲಿ ಔಡಿ ಕಾರ್‌ನಲ್ಲಿ ದೂರ ಪಯಣ ಕೈಗೊಳ್ಳಲು ನಾನು ಇಷ್ಟಪಡುತ್ತೇನೆ’ ಎಂದರು.

‘ಔಡಿ ಎ6 ಬಿಎಸ್–6, 2 ಲೀಟರ್ ಟಿಎಫ್ ಎಸ್‌ಐ ಎಂಜಿನ್ ಹೊಂದಿದೆ. ಗರಿಷ್ಠ ವೇಗ ಗಂಟೆಗೆ 250 ಕಿ.ಮೀ. ಸಿಂಗಲ್ ಫ್ರೇಮ್ ಗ್ರಿಲ್ ಹೊಂದಿರುವ ಮೊದಲ ಕಾರ್ ಆಗಿದೆ. ಈ ಮಾದರಿಯು ಹಿಂದಿನದ್ದಕ್ಕಿಂತ ಅಧಿಕ ಉದ್ದ, ಅಗಲ ಮತ್ತು ಎತ್ತರವಾಗಿದೆ’ ಎಂದು ಸಿಂಗ್ ಮಾಹಿತಿ ನೀಡಿದರು.

ವೈಶಿಷ್ಟ್ಯಗಳು: ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್ಸ್, 8 ಏರ್ ಬ್ಯಾಗ್, ಟಚ್ ಸ್ಕ್ರೀನ್ ಬೇಸ್ಡ್ ಸೆಂಟರ್ ಕಂನ್ಸೋಲ್, ಔಡಿ ವರ್ಚುವಲ್ ಕಾಕ್ ಪಿಟ್ ಎಲೆಕ್ಟ್ರಿಕಲಿ ಅಡ್ಜೆಸ್ಟೆಬಲ್ ಫ್ರಂಟ್‌ಸೀಟ್. ಪಾರ್ಕ್ ಅಸಿಸ್ಟೆಂಟ್ ಫ್ರಂಟ್ ಆ್ಯಂಡ್‌ ರಿಯರ್ ಪಾರ್ಕಿಂಗ್ ಸೆನ್ಸರ್, ಲೇನ್ ಡಿಪಾರ್ಚರ್ ವಾರ್ನಿಂಗ್. ಮೈಲ್ಡ್ ಹೈಬ್ರಿಡ್‌ ಟೆಕ್ನಾಲಜಿ ಒಳಗೊಂಡಿದೆ.

ಒಳಾಂಗಣ: 10.1 ಇಂಚು ಎಂಎಂಐ ಡಿಸ್ ಪ್ಲೆ, ಸ್ಮಾರ್ಟ್‌ಫೋನ್ ಇಂಟರರ್‌ಫೇಸ್ ವಿತ್ ಔಡಿ ಫೋನ್ ಬಾಕ್ಸ್, ವಯರ್‌ಲೆಸ್ ಚಾರ್ಜಿಂಗ್ ಇದೆ. ಚಾಲನೆ ವೇಳೆ ಪ್ರಯಾಣಿಕರ ಭಾವನೆಗಳಿಗೆ ಅನುಗುಣವಾಗಿ ಕಾರಿನ ಒಳಾಂಗಣ ಬದಲಿಸಲು 30 ಬಗೆಯ ಬಣ್ಣಗಳ ಆಯ್ಕೆ ಸೌಲಭ್ಯ ಇದೆ.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ಮುಂಬೈಗೆ ತೆರಳಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT