ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಂದ್ರ ಲಾಭ ₹ 2,360 ಕೋಟಿ

Last Updated 5 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ನವದೆಹಲಿ: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಜೂನ್ ತ್ರೈಮಾಸಿಕದ ತೆರಿಗೆ ನಂತರದ ಲಾಭವು ₹ 2,360 ಕೋಟಿ ಆಗಿದೆ. ಆಟೊಮೊಬೈಲ್‌ ಹಾಗೂ ಕೃಷಿ ವಿಭಾಗದಲ್ಲಿ ಉತ್ತಮ ವಹಿವಾಟು ಕಂಡುಬಂದ ಕಾರಣ ಇಷ್ಟು ಲಾಭ ಸಾಧ್ಯವಾಗಿದೆ.

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ₹ 331 ಕೋಟಿ ನಷ್ಟ ಅನುಭವಿಸಿತ್ತು. ಕಂಪನಿಯ ಕಾರ್ಯಾಚರಣೆ ವರಮಾನವು ಜೂನ್ ತ್ರೈಮಾಸಿಕದಲ್ಲಿ ₹ 28,412 ಕೋಟಿಗೆ ಏರಿಕೆ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ವರಮಾನವು ₹ 19,171 ಕೋಟಿ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಆಟೊಮೊಬೈಲ್ ವಿಭಾಗದಲ್ಲಿ ಕಂಪನಿಯು ₹ 12,740 ಕೋಟಿ, ಕೃಷಿ ಉಪಕರಣಗಳ ವಿಭಾಗದಲ್ಲಿ ₹ 8,427 ಕೋಟಿ ವರಮಾನವನ್ನು ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT