ಶನಿವಾರ, ಅಕ್ಟೋಬರ್ 23, 2021
20 °C

ಮಹೀಂದ್ರ ಎಕ್ಸ್‌ಯುವಿ700: 57 ನಿಮಿಷದಲ್ಲಿ 25 ಸಾವಿರ ಬುಕಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹೊಸ ವಾಹನ ‘ಎಕ್ಸ್‌ಯುವಿ700’ಗೆ 57 ನಿಮಿಷಗಳಲ್ಲಿ 25 ಸಾವಿರ ಬುಕಿಂಗ್ ಬಂದಿವೆ ಎಂದು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ಗುರುವಾರ ತಿಳಿಸಿದೆ.

ಮೊದಲ 25 ಸಾವಿರ ‘ಎಕ್ಸ್‌ಯುವಿ700’ ವಾಹನಗಳಿಗೆ ₹ 11.99 ಲಕ್ಷದಿಂದ ₹ 22.89 ಲಕ್ಷದವರೆಗೆ (ಎಕ್ಸ್‌ ಷೋರೂಂ) ಪರಿಚಯಾತ್ಮಕ ಬೆಲೆಯನ್ನು ಕಂಪನಿ ಘೋಷಿಸಿತ್ತು. ಎರಡನೇ ಹಂತದ ಬುಕಿಂಗ್‌ ಅಕ್ಟೋಬರ್‌ 8ರಿಂದ ಆರಂಭ ಆಗಲಿದ್ದು, ಬೆಲೆಯು ₹ 12.49 ಲಕ್ಷದಿಂದ ₹ 22.99 ಲಕ್ಷದವರೆಗೆ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಡೀಸೆಲ್‌ ಮತ್ತು ಪೆಟ್ರೋಲ್‌ ಎಂಜಿನ್‌ನ ಮ್ಯಾನುಯಲ್‌ ಮತ್ತು ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳಲ್ಲಿ ಇದು ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು