ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾನ್‌–ಆಧಾರ್‌ ಜೋಡಣೆಗೆ ಡಿ.31ರ ಗಡುವು: ಐಟಿ ಇಲಾಖೆ

Last Updated 16 ಡಿಸೆಂಬರ್ 2019, 10:58 IST
ಅಕ್ಷರ ಗಾತ್ರ

ನವದೆಹಲಿ: ಇದೇ ಡಿಸೆಂಬರ್‌ 31ರ ಒಳಗಾಗಿ ಶಾಶ್ವತ ಖಾತೆ ಸಂಖ್ಯೆಗೆ (ಪ್ಯಾನ್‌) ಆಧಾರ್ ಸಂಖ್ಯೆಯನ್ನು ಜೋಡಿಸುವಂತೆಆದಾಯ ತೆರಿಗೆ ಇಲಾಖೆಯು ಸೂಚನೆ ನೀಡಿದೆ.

ಯಾವುದೇ ಅಡೆತಡೆ ಇಲ್ಲದೆ ಆದಾಯ ತೆರಿಗೆಯ ಸೇವೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ಯಾನ್‌ಗೆ ಆಧಾರ್‌ ಜೋಡಿಸುವಂತೆ ತಿಳಿಸಿದೆ.

ಈ ಪ್ರಕ್ರಿಯೆಗೆ ಇದುವರೆಗೆ ಒಟ್ಟಾರೆ ಏಳು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ.ಆದಾಯ ತೆರಿಗೆ ಪಾವತಿದಾರರು ‘ಪ್ಯಾನ್‌’ಗೆಆಧಾರ್‌ ಜೋಡಿಸುವುದು ಆದಾಯ ತೆರಿಗೆ ಕಾಯ್ದೆ ಪ್ರಕಾರ ಕಡ್ಡಾಯವಾಗಿದೆ.

ಈ ಹಿಂದೆ ಆಧಾರ್‌–ಪ್ಯಾನ್‌ ಜೋಡಣೆಗೆ ಸೆಪ್ಟೆಂಬರ್ 30ರ ಗಡುವು ನೀಡಲಾಗಿತ್ತು.

ಕೇಂದ್ರ ಸರ್ಕಾರದ ಆಧಾರ್‌ ಕಾರ್ಯಕ್ರಮ ಸಾಂವಿಧಾನ ಸಿಂಧುತ್ವ ಹೊಂದಿರುವುದಾಗಿ ಕಳೆದ ವರ್ಷ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಪ್ಯಾನ್‌ ಪಡೆಯಲು ಹಾಗೂ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಆಧಾರ್‌ ಕಡ್ಡಾಯ ಮುಂದುವರಿಯಲಿದೆ ಎಂದು ಕೋರ್ಟ್‌ ತಿಳಿಸಿತ್ತು.

ಆದಾಯ ತೆರಿಗೆ ಕಾಯ್ಡೆ ಸೆಕ್ಷನ್‌ 139 ಎಎ(2)ರ ಪ್ರಕಾರ ಪ್ಯಾನ್‌ ಹೊಂದಿರುವ ವ್ಯಕ್ತಿಯು ಆಧಾರ್‌ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ತೆರಿಗೆ ಇಲಾಖೆಗೆ ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT