ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್‌ ಎಂ–ಕ್ಯಾಪ್‌ ₹27,635 ಕೋಟಿ ಇಳಿಕೆ

Published 5 ಮೇ 2024, 14:09 IST
Last Updated 5 ಮೇ 2024, 14:09 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಪ್ರಮುಖ 10 ಕಂಪನಿಗಳ ಪೈಕಿ 6 ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹68,417 ಕೋಟಿ ಕರಗಿದೆ. 

ಭಾರ್ತಿ ಏರ್‌ಟೆಲ್‌ನ ಎಂ–ಕ್ಯಾಪ್ ₹27,635 ಕೋಟಿ ಕರಗಿದ್ದು, ಒಟ್ಟು ಮೌಲ್ಯ ₹7.23 ಲಕ್ಷ ಕೋಟಿಗೆ ಇಳಿದಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ₹23,341 ಕೋಟಿ, ಎಲ್‌ಐಸಿ ₹5,724 ಕೋಟಿ, ಇನ್ಫೊಸಿಸ್‌ ₹5,686 ಕೋಟಿ, ಐಟಿಸಿ ₹4,619 ಕೋಟಿ ಮತ್ತು ಹಿಂದುಸ್ತಾನ್‌ ಯೂನಿಲಿವರ್‌ನ ಮಾರುಕಟ್ಟೆ ಮೌಲ್ಯವು ₹1,409 ಕೋಟಿ ಇಳಿಕೆಯಾಗಿದೆ.

ಎಸ್‌ಬಿಐ ಮಾರುಕಟ್ಟೆ ಮೌಲ್ಯವು ₹26,901 ಕೋಟಿ, ಐಸಿಐಸಿಐ ಬ್ಯಾಂಕ್‌ ₹24,651 ಕೋಟಿ, ಟಿಸಿಎಸ್‌ ₹9,587 ಕೋಟಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ₹6,761 ಕೋಟಿ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT