ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೆಚ್ಚಳ, ಕರಗಿದ ಸಂಪತ್ತು

Last Updated 19 ಏಪ್ರಿಲ್ 2021, 15:11 IST
ಅಕ್ಷರ ಗಾತ್ರ

ಮುಂಬೈ: ದೇಶದಲ್ಲಿ ಕೋವಿಡ್–19 ಪರಿಸ್ಥಿತಿ ಬಿಗಡಾಯಿಸುತ್ತಿರುವುದು ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕ ಕುಸಿತಕ್ಕೆ ಕಾರಣವಾಯಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ 883 ಅಂಶ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕವಾದ ನಿಫ್ಟಿ 258 ಅಂಶ ಕುಸಿತ ಕಂಡವು. ಸೋಮವಾರ ಹೂಡಿಕೆದಾರರ ಒಟ್ಟು ಸಂಪತ್ತು ₹ 3.53 ಲಕ್ಷ ಕೋಟಿಯಷ್ಟು ಕಡಿಮೆ ಆಯಿತು.

ಕೆಲವು ರಾಜ್ಯಗಳಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಲಾಕ್‌ಡೌನ್‌ ಕ್ರಮಗಳು ಆರ್ಥಿಕ ಚೇತರಿಕೆಯ ವಿಚಾರವಾಗಿ ಕಳವಳ ಮೂಡಿಸಿವೆ. ರೂಪಾಯಿ ಮೌಲ್ಯವು ಸೋಮವಾರದ ವಹಿವಾಟಿನಲ್ಲಿ 52 ಪೈಸೆಯಷ್ಟು ತಗ್ಗಿದ್ದು ಕೂಡ ಹೂಡಿಕೆದಾರರ ಮೇಲೆ ಪರಿಣಾಮ ಉಂಟುಮಾಡಿತು ಎಂದು ವರ್ತಕರು ತಿಳಿಸಿದ್ದಾರೆ.

ವಹಿವಾಟಿನ ಆರಂಭದಲ್ಲಿ 1,469 ಅಂಶ ಕುಸಿತ ಕಂಡಿದ್ದ ಸೆನ್ಸೆಕ್ಸ್, ನಂತರ ತುಸು ಚೇತರಿಕೆ ದಾಖಲಿಸಿತು. ಪವರ್‌ಗ್ರಿಡ್, ಒಎನ್‌ಜಿಸಿ, ಇಂಡಸ್‌ ಇಂಡ್‌ ಬ್ಯಾಂಕ್‌, ಕೋಟಕ್ ಬ್ಯಾಂಕ್, ಎಲ್‌ಆ್ಯಂಡ್‌ಟಿ, ಬಜಾಜ್‌ ಫಿನ್‌ಸರ್ವ್‌, ಏಷ್ಯನ್‌ ಪೇಂಟ್ಸ್‌, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಇಳಿಕೆ ಕಂಡವು. ಡಾ ರೆಡ್ಡೀಸ್ ಮತ್ತು ಇನ್ಫೊಸಿಸ್ ಷೇರುಗಳು ಮಾತ್ರ ಏರಿಕೆ ದಾಖಲಿಸಿದವು.

‘ಹಲವು ರಾಜ್ಯಗಳು ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ಹೆಚ್ಚಿಸಿದ ಪರಿಣಾಮವಾಗಿ ದೇಶಿ ಷೇರು ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು. ಜನರ ಸಂಚಾರಕ್ಕೆ ದೆಹಲಿ ಮತ್ತು ರಾಜಸ್ಥಾನ ಸರ್ಕಾರಗಳು ಹೆಚ್ಚಿನ ನಿರ್ಬಂಧ ವಿಧಿಸಿದ್ದು ಹೂಡಿಕೆದಾರರ ವಿಶ್ವಾಸ ಕುಂದಿಸಿತು’ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಬಿನೋದ್ ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT