ಭಾನುವಾರ, ಜನವರಿ 19, 2020
29 °C

ಮಾರುತಿ ಹೊಸ ಆಲ್ಟೊ ವಿಎಕ್ಸ್‌ಐ ಪ್ಲಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಹೊಸದಾದ ಆಲ್ಟೊ ವಿಎಕ್ಸ್‌ಐ ಪ್ಲಸ್‌ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ ಷೋರೂಂನಲ್ಲಿ ಇದರ ಬೆಲೆ ₹ 3.80 ಲಕ್ಷ ಇದೆ.

‌ಹೊಸ ಕಾರ್‌ ಏರೊ ಎಡ್ಜ್‌ ವಿನ್ಯಾಸ, ಡ್ಯುಯಲ್‌ ಟೋನ್‌ ಇಂಟೀರಿಯರ್ಸ್‌, ಗರಿಷ್ಠ ಇಂಧನ ಕ್ಷಮತೆ ಮತ್ತು ಇತ್ತೀಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಬಿಎಸ್‌6 ಎಂಜಿನ್‌ ಇದ್ದು, ಪ್ರತಿ ಲೀಟರಿಗೆ 22.05 ಕಿ.ಮೀ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.

17.8 ಇಂಚಿನ ಟಚ್‌ಸ್ಕ್ರೀನ್‌ ಹೊಂದಿರುವ ಎನ್‌ಫೊಟೈನ್‌ಮೆಂಟ್‌ ಸಿಸ್ಟಂ, ಆ್ಯಪಲ್‌ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೊ ಸೌಲಭ್ಯ ಹೊಂದಿದೆ ಎಂದು ಹೇಳಿದೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು