ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟರ್ ಜನರೇಟರ್ ಲೋಪ ಸರಿಪಡಿಸಲಿರುವ ಮಾರುತಿ

Last Updated 3 ಸೆಪ್ಟೆಂಬರ್ 2021, 18:36 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ), ತನ್ನ ವಿವಿಧ ಮಾದರಿಗಳ ಕಾರುಗಳಲ್ಲಿನ ಮೋಟರ್‌ ಜನರೇಟರ್‌ನಲ್ಲಿನ ಲೋಪವನ್ನು ಸರಿ‍‍‍‍ಪಡಿಸಿಕೊಡಲಿದೆ.

ಸಿಯಾಜ್, ಎರ್ಟಿಗಾ, ವಿತಾರಾ ಬ್ರೆಜಾ, ಎಸ್–ಕ್ರಾಸ್ ಮತ್ತು ಎಕ್ಸ್‌ಎಲ್‌6 ಮಾದರಿಯ ಒಟ್ಟು 1,81,754 ಕಾರುಗಳ ಮೋಟರ್‌ ಜನರೇಟರ್‌ನಲ್ಲಿ ಲೋಪ ಇದೆಯೇ ಎಂಬುದನ್ನು ಪರಿಶೀಲಿಸಿ, ಲೋಪವನ್ನು ಸರಿಪಡಿಸಿಕೊಡಲಿದೆ. ಈ ಮಾದರಿಗಳ ಪೆಟ್ರೋಲ್ ಎಂಜಿನ್ ಕಾರುಗಳಲ್ಲಿ ಈ ಲೋಪವನ್ನು ಕಂಪನಿ ಗುರುತಿಸಿದೆ.

2018ರ ಮೇ 4ರಿಂದ 2020ರ ಅಕ್ಟೋಬರ್ 27ರವರೆಗೆ ತಯಾರಾದ ಈ ಮಾದರಿಗಳ ಕಾರುಗಳಲ್ಲಿ ಲೋಪ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದುಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ‘ಗ್ರಾಹಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು, ಈ ಕಾರುಗಳನ್ನು ಸ್ವಯಂಪ್ರೇರಿತವಾಗಿ ನಾವು ಪರಿಶೀಲಿಸುತ್ತೇವೆ. ಲೋಪ ಇದ್ದಲ್ಲಿ ಮೋಟರ್‌ ಜನರೇಟರ್‌ಅನ್ನು ಬದಲಿಸಿ ಕೊಡುವ ಕೆಲಸ ಮಾಡಲಿದ್ದೇವೆ’ ಎಂದು ಹೇಳಿದೆ.

ಯಾರು ತಮ್ಮ ಕಾರನ್ನು ಕಂಪನಿಯ ವರ್ಕ್‌ಶಾಪ್‌ಗೆ ತರಬೇಕು ಎಂಬ ಬಗ್ಗೆ ಗ್ರಾಹಕರಿಗೇ ಸಂದೇಶ ರವಾನಿಸಲಾಗುತ್ತದೆ. ಲೋಪ ಇರುವ ಮೋಟರ್‌ ಜನರೇಟರ್‌ ಬದಲಿಸಿ ಕೊಡುವ ಕಾರ್ಯವು ನವೆಂಬರ್ ಮೊದಲ ವಾರದಿಂದ ಶುರುವಾಗಲಿದೆ. ಅಲ್ಲಿಯವರೆಗೆ ಗ್ರಾಹಕರು ನೀರು ತುಂಬಿಕೊಂಡಿರುವಲ್ಲಿ ಕಾರು ಚಲಾಯಿಸಬಾರದು, ಕಾರಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಬಿಡಿಭಾಗಗಳ ಮೇಲೆ ನೀರನ್ನು ನೇರವಾಗಿ ಸಿಂಪಡಿಸಬಾರದು ಎಂದು ಕಂಪನಿ ಸೂಚಿಸಿದೆ.

ಕಾರಿನ ಎಂಜಿನ್‌ಗೆ ಹೆಚ್ಚಿನ ಶಕ್ತಿಯನ್ನು ನೀಡುವಲ್ಲಿ ಮೋಟರ್ ಜನರೇಟರ್‌ ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT