ಶುಕ್ರವಾರ, ಜುಲೈ 30, 2021
28 °C

ವಾಹನ ಸಾಲ: ಮಾರುತಿ–ಇಂಡಸ್‌ಇಂಡ್‌ ಬ್ಯಾಂಕ್‌ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ ಸಂದರ್ಭದಲ್ಲಿ ಗ್ರಾಹಕರಿಗೆ ಸುಲಭವಾಗಿ ವಾಹನ ಸಾಲ ಸಿಗುವಂತೆ ಮಾಡಲು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಇಂಡಸ್‌ಇಂಡ್‌ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಗ್ರಾಹಕರು ಮೂರು ತಿಂಗಳವರೆಗೆ ₹ 1 ಲಕ್ಷದ ಸಾಲಕ್ಕೆ ₹ 899ರ ಇಎಂಐ ಯೋಜನೆ ಪಡೆಯಬಹುದು. ₹ 1 ಲಕ್ಷಕ್ಕೆ ₹1,800ರ ಇಎಂಐನಲ್ಲಿ ಸ್ಟೆಪ್‌ ಅಪ್‌ ಯೋಜನೆ ಹಾಗೂ ಶೇ 100ರಷ್ಟು ಆನ್‌ರೋಡ್‌ ಫಂಡಿಂಗ್‌ ಸಹ ಸಿಗಲಿದೆ. ಇದಕ್ಕೆ ಆದಾಯದ ದಾಖಲೆಪತ್ರ ನೀಡಬೇಕು. ಆದಾಯ ಪತ್ರ ಇಲ್ಲದೇ ಇದ್ದರೆ ಎಕ್ಸ್‌ ಷೋರೂಂ ಬೆಲೆಗೆ ಶೇ 100ರವರೆಗೂ ನೆರವು ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಎಲ್ಲಾ ಮಾದರಿಯ ವಾಹನಗಳಿಗೂ ಈ ಕೊಡುಗೆಗಳು ಅನ್ವಯಿಸಲಿವೆ.

ವೇತನದಾರರು, ಸ್ವಯಂ ಉದ್ಯೋಗ ಮಡುವವರು, ಕೃಷಿಕರು ಮತ್ತು ಉದ್ಯಮಿಗಳು ಇಂಡಸ್‌ಇಂಡ್‌ ಬ್ಯಾಂಕ್‌ನ ಗ್ರಾಹಕರಾಗಿದ್ದು, ಈ ಒಪ್ಪಂದವು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದೆ.

ಕಂಪನಿಯು ದೇಶದಾದ್ಯಂತ 3,086 ಷೋರೂಂಗಳನ್ನು ಹೊಂದಿದೆ. ಬ್ಯಾಂಕ್‌ ದೇಶದಾದ್ಯಂತ 1,900 ಶಾಖೆಗಳನ್ನು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು