ಶನಿವಾರ, ಜುಲೈ 24, 2021
27 °C

ಕ್ಲೇಮ್‌ ಪಾವತಿ: ಮ್ಯಾಕ್ಸ್‌ ಲೈಫ್‌ನ ಗರಿಷ್ಠ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮ್ಯಾಕ್ಸ್ ಲೈಫ್ ಇನ್ಶುರೆನ್ಸ್‌ ಕಂಪನಿಯು 2019-20 ನೇ ಸಾಲಿನಲ್ಲಿ ₹ 563 ಕೋಟಿ ಮೌಲ್ಯದ 15,342 ಡೆತ್ ಕ್ಲೇಮ್‌ ಗಳನ್ನು ಪಾವತಿಸಿದೆ.

 5 ವರ್ಷಗಳಲ್ಲಿ ಡೆತ್ ಕ್ಲೇಮ್ ಪಾವತಿಯು ಶೇ 99.22 ರಷ್ಟು ಆಗಿದ್ದು, ಇದು ಸಂಸ್ಥೆಯ ಸಾರ್ವಕಾಲಿಕ ಸಾಧನೆಯಾಗಿದೆ. ಡೆತ್ ಕ್ಲೇಮ್ ಪಾವತಿಯಲ್ಲಿ ಸ್ಥಿರತೆ  ಕಾಯ್ದುಕೊಂಡು ಬರಲಾಗಿದೆ.  

ಎಲ್ಲಾ ಅರ್ಹ ಗ್ರಾಹಕರಿಗೆ ಕ್ಷಿಪ್ರಗತಿಯಲ್ಲಿ ಕ್ಲೇಮ್ ಪಾವತಿಗಳನ್ನು ತಲುಪಿಸಲಾಗುತ್ತಿದೆ. ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಅರ್ಹ ಫಲಾನುಭವಿಗಳಿಗೆ ಒಂದೇ ದಿನಲ್ಲಿ ಕ್ಲೇಮ್‌ ಪಾವತಿ ಮಾಡಲು ಇನ್‌ಸ್ಟಾ ಕ್ಲೇಮ್‌ ಪರಿಚಯಿಸಲಾಗಿದೆ. ಇದಲ್ಲದೆ, ಕೋವಿಡ್-19 ಸಾಂಕ್ರಾಮಿಕದ ಈ ಅವಧಿಯಲ್ಲಿ ಆನ್‌ಲೈನ್ ಮತ್ತು ಮನೆಯಿಂದಲೇ ಇಮೇಲ್ ಹಾಗೂ ವಾಟ್ಸ್ಆ್ಯಪ್‌ ಮೂಲಕ ಬರುವ ಅರ್ಹ ಕ್ಲೇಮ್‌ಗಳನ್ನು ಪಾವತಿ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು