ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ವಹಿವಾಟು ಸ್ಥಗಿತಗೊಳಿಸಿದ ಮೆಕ್‌ಡೊನಾಲ್ಡ್‌, ಪೆಪ್ಸಿ, ಕೋಕಾ-ಕೋಲಾ 

Last Updated 9 ಮಾರ್ಚ್ 2022, 6:05 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾದಲ್ಲಿ ಮೆಕ್‌ಡೊನಾಲ್ಡ್‌, ಟಾಟಾ ಸ್ಟಾರ್‌ಬಕ್ಸ್‌ ಸೇರಿದಂತೆ ಜಾಗತಿಕ ಪಾನೀಯ ಬ್ರ್ಯಾಂಡ್‌ಗಳಾದ ಪೆಪ್ಸಿ, ಕೋಕಾ-ಕೋಲಾ ಕಂಪನಿಗಳು ತನ್ನ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

ಸಾರ್ವಜನಿಕ ಒತ್ತಡಕ್ಕೆ ಮಣಿದಿರುವುದಾಗಿ ಕಂಪನಿಗಳು ತಿಳಿಸಿದ್ದು, ಈ ಮೂಲಕ ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿವೆ.

ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರೊಂದಿಗೆ ನಾವು ನಿಲ್ಲುತ್ತೇವೆ. ಜತೆಗೆ, ರಷ್ಯಾದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೋಕಾ-ಕೋಲಾ ಕಂಪನಿ ತಿಳಿಸಿದೆ.

ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ಅನಾವಶ್ಯಕ ದಾಳಿಗಳನ್ನು ನಿರ್ಲಕ್ಷಿಸಲು ಸಾದ್ಯವಿಲ್ಲ ಎಂದು ಫಾಸ್ಟ್ ಫುಡ್ ಕಂಪನಿ ತಿಳಿಸಿದೆ. ಜತೆಗೆ, ರಷ್ಯಾದಲ್ಲಿನ ತನ್ನ 850 ರೆಸ್ಟೋರೆಂಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಹೇಳಿದೆ.

ಪೆಪ್ಸಿಕೊ ತನ್ನ ಪ್ರಮುಖ ಪಾನೀಯಗಳನ್ನು ರಷ್ಯಾದಲ್ಲಿ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಿದರೂ, ಹಾಲು ಮತ್ತು ಮಕ್ಕಳ ಆಹಾರದಂತಹ ಉತ್ಪನ್ನಗಳ ಮಾರಾಟ ಮುಂದುವರಿಸುವುದಾಗಿ ತಿಳಿಸಿದೆ.

ರಷ್ಯಾದಲ್ಲಿ 130 ಬ್ರಾಂಚ್‌ಗಳನ್ನು ಹೊಂದಿರುವ ಸ್ಟಾರ್‌ಬಕ್ಸ್, ಉತ್ಪನ್ನಗಳ ಸಾಗಣೆ ಸೇರಿದಂತೆ ಎಲ್ಲಾ ರೀತಿಯ ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಹೇಳಿಕೆ ನೀಡಿದೆ.

ರಷ್ಯಾದಲ್ಲಿ ಸುಮಾರು 1,000ಕ್ಕೂ ಹೆಚ್ಚು ಕೆಎಫ್‌ಸಿ ರೆಸ್ಟೋರೆಂಟ್‌ಗಳು ಮತ್ತು 50 ಪಿಜ್ಜಾ ಹಟ್ ಮಳಿಗೆಗಳನ್ನು ಮುಚ್ಚುವುದಾಗಿ ಕಂಪನಿಗಳು ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT