ಬೆಂಗಳೂರು: ಕಾಫಿ ಡೇ ಎಂಟರ್‌ಪ್ರೈಸಸ್‌ನ (ಸಿಡಿಇ) ಸದ್ಯದ ನಿರ್ದೇಶಕ ಮಂಡಳಿಯು ಕಂಪನಿಯ ಪ್ರಮುಖವಲ್ಲದ ವಹಿವಾಟಿನ ಷೇರು ಮಾರಾಟ ಮಾಡಿ ಸಾಲದ ಹೊರೆ ತಗ್ಗಿಸಲು ಗಮನ ಕೇಂದ್ರೀಕರಿಸಿದೆ ಎಂದು ಪ್ರವರ್ತಕರ ಪರವಾಗಿ ಸ್ಪಷ್ಟನೆ ನೀಡಲಾಗಿದೆ.

ಕಾಫಿ ಸೇವನೆ ಸಂಸ್ಕೃತಿಯನ್ನು ದೇಶದಾದ್ಯಂತ ಜನಪ್ರಿಯಗೊಳಿಸಿದ ಕಂಪನಿಯ ಬ್ರ್ಯಾಂಡ್ ಮತ್ತು ನೌಕರರ ಉದ್ಯೋಗ ರಕ್ಷಿಸುವುದೇ ತಮ್ಮ ಆದ್ಯತೆಯಾಗಿತ್ತು. ವಹಿವಾಟು ವಿಸ್ತರಿಸಲು ಹೂಡಿಕೆದಾರರ ಜತೆಗಿನ ಮಾತುಕತೆ ಪ್ರಗತಿಯಲ್ಲಿ ಇದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸ್ಥಾಪಕ ವಿ. ಜಿ. ಸಿದ್ಧಾರ್ಥ ಅವರ ಅಕಾಲಿಕ ಸಾವಿನ ಸಂದರ್ಭದಲ್ಲಿ ಪ್ರವರ್ತಕರ ಕುಟುಂಬವು ಕಂಪನಿಯ ವಹಿವಾಟಿನಲ್ಲಿ ಭಾಗಿಯಾಗಿರಲಿಲ್ಲ. ಸಿದ್ಧಾರ್ಥ ಅವರ ಸಾವಿನ ನಂತರವೇ ಪ್ರವರ್ತಕರ ಕುಟುಂಬದ ಸದಸ್ಯರು ಮತ್ತು ಆಡಳಿತ ಮಂಡಳಿಯು ಕಂಪನಿಯ ವಹಿವಾಟನ್ನು ಮುಂದುವರೆಸಿದೆ. ಪಾಲುದಾರರ ಮತ್ತು ಸಾವಿರಾರು ಸಿಬ್ಬಂದಿಯ ಹಿತರಕ್ಷಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ತನಿಖೆಗೆ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.