ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಮರ್ಸಿಡೀಸ್‌ ಬೆಂಜ್‌ ಕಾರು ಮಾರಾಟ ಶೇ 10ರಷ್ಟು ಹೆಚ್ಚಳ

Published 11 ಏಪ್ರಿಲ್ 2024, 12:51 IST
Last Updated 11 ಏಪ್ರಿಲ್ 2024, 12:51 IST
ಅಕ್ಷರ ಗಾತ್ರ

ನವದೆಹಲಿ: ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡೀಸ್ ಬೆಂಜ್‌, 2023–24ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಒಟ್ಟು 18,123 ಕಾರುಗಳನ್ನು ಮಾರಾಟ ಮಾಡಿದೆ.

2022–23ರಲ್ಲಿ 16,497 ವಾಹನಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ  ಮಾರಾಟದಲ್ಲಿ ಶೇ 10ರಷ್ಟು ಏರಿಕೆಯಾಗಿದೆ. ಎಸ್‌ಯುವಿ ವಾಹನಗಳಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಒಟ್ಟಾರೆ ಚಿಲ್ಲರೆ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ.

ಜನವರಿ–ಮಾರ್ಚ್‌ ತ್ರೈಮಾಸಿಕದ ಮಾರಾಟದಲ್ಲಿ ಶೇ 15ರಷ್ಟು ಏರಿಕೆ ಆಗಿದ್ದು, ಒಟ್ಟು 5,412 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 4,697 ಮಾರಾಟವಾಗಿದ್ದವು ಎಂದು ತಿಳಿಸಿದೆ.

ಪ್ರಸಕ್ತ ವರ್ಷದಲ್ಲಿ ಒಂಬತ್ತು ಹೊಸ ಮಾದರಿಯ ಕಾರುಗಳನ್ನು ಪರಿಚಯಿಸಲು ತೀರ್ಮಾನಿಸಲಾಗಿದೆ. ಈ ಪೈಕಿ ಮೂರು ವಿದ್ಯುತ್‌ ಚಾಲಿತ ಕಾರುಗಳು ಇರಲಿವೆ. ಇದೇ ತಿಂಗಳಿನಲ್ಲಿ ನವದೆಹಲಿ ಮತ್ತು ಮುಂಬೈನಲ್ಲಿ ಹೊಸ ಷೋ ರೂಂ ಉದ್ಘಾಟಿಸಲಾಗುವುದು. ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಈ ವರ್ಷದಲ್ಲಿ ದೇಶದ 10 ನಗರಗಳಲ್ಲಿ 20 ವರ್ಕ್‌ಶಾಪ್‌ ಸೆಂಟರ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT