ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್‌ನಲ್ಲಿ ವಿಶ್ವ ಹಾಲು ದಿನಾಚರಣೆ

Last Updated 3 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್), ಬೆಂಗಳೂರು ಹಾಲು ಒಕ್ಕೂಟದ ಸಹಯೋಗದೊಂದಿಗೆ ಜೂನ್‌ 1ರಂದು ‘ವಿಶ್ವ ಹಾಲು ದಿನಾಚರಣೆ’ಯನ್ನು ವಿಶಿಷ್ಟವಾಗಿ ಆಚರಿಸಿತು.

ಚೀಸ್ ಬಳಕೆ ಬಗ್ಗೆ ಅರಿವು ಮೂಡಿಸಲು ಸಂಸ್ಥೆಯ ಸಿಬ್ಬಂದಿಗಾಗಿ ಚೀಸ್‌ ಬಳಸಿ ವಿವಿಧ ಖಾದ್ಯ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ತುಂಗ ಮತ್ತು ಯಶಸ್ವಿನಿ (ಪ್ರಥಮ), ರಾಧಾ ಮತ್ತು ತನುಜ (ದ್ವಿತೀಯ) ಮತ್ತು ರೇಣುಕ ಮತ್ತು ರೇಖಾ (ತೃತೀಯ) ಬಹುಮಾನ ಪಡೆದರು. ಸಮರ್ಥನಂ ಅಂಗವಿಕಲರ ಸಂಸ್ಥೆಯ 500 ಮಕ್ಕಳಿಗೆ ಹಾಲು ಮತ್ತು ಸಿಹಿ ಉತ್ಪನ್ನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕ (ಮಾರುಕಟ್ಟೆ) ಎಂ.ಟಿ. ಕುಲಕರ್ಣಿ, ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಟಿ ಗೋಪಾಲ್, ನಿರ್ದೇಶಕರು (ಪಶು ಸಂಗೋಪನೆ) ಡಾ. ಡಿ.ಎನ್ ಹೆಗಡೆ, ಮದರ್ ಡೇರಿ ನಿರ್ದೇಶಕ ಬಿ.ವಿ ಸತ್ಯನಾರಾಯಣ್, ನಿರ್ದೇಶಕ (ಆಡಳಿತ) ಬಿ.ಎಂ.ಸುರೇಶ್ ಕುಮಾರ್, ಮತ್ತು ವಿಶೇಷ ಆತಿಥಿಯಾಗಿ ಆಹಾರ ತಜ್ಞೆ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT