ಇಂದು ಖನಿಜ ಮೇಳ

7

ಇಂದು ಖನಿಜ ಮೇಳ

Published:
Updated:

ನವದೆಹಲಿ: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್‌ಎಂಡಿಸಿ) ಇದೇ 9ರಿಂದ ಎರಡು ದಿನಗಳ ಕಾಲ ಇಲ್ಲಿ ಖನಿಜ ಮತ್ತು ಲೋಹಗಳ ಭವಿಷ್ಯ ಕುರಿತು ಎರಡು ದಿನಗಳ ಅಂತರ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ.

ದೇಶದಲ್ಲಿ ಖನಿಜ ಸಂಪನ್ಮೂಲ ಅಪಾರವಾಗಿದೆ. 95 ಬಗೆಯ ಖನಿಜಗಳು ಇಲ್ಲಿ ಲಭ್ಯ ಇವೆ. ಖನಿಜ ನಿಕ್ಷೇಪ ಹೊರ ತೆಗೆಯುವ ಮತ್ತು ಸಂಸ್ಕರಣೆ  ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಬಂಡವಾಳ ಹೂಡಿಕೆಗೆ ಅವಕಾಶ ಇದೆ. ವಿಶ್ವದಾದ್ಯಂತ ‘ಖನಿಜ ಮತ್ತು ಲೋಹಗಳ ಭವಿಷ್ಯ 2030’ ಕುರಿತು ನಡೆಯಲಿರುವ ಸಮಾವೇಶದಲ್ಲಿ ಸಿಇಒಗಳ ಸಭೆ, ವಿಚಾರಗೋಷ್ಠಿ ಏರ್ಪಡಿಸಲಾಗಿದೆ.

ಥಾಮ್ಸನ್‌ ಕೊಡುಗೆ
ಬೆಂಗಳೂರು:
ಇದೇ 10ರಿಂದ ನಡೆಯಲಿರುವ ಫ್ಲಿಪ್‌ಕಾರ್ಟ್‌ನ ‘ಬಿಗ್‌ ಬಿಲಿಯನ್‌ ಡೇಸ್‌’ ವಿಶೇಷ ಮಾರಾಟ ದಿನಗಳಲ್ಲಿ ಥಾಮ್ಸನ್‌ ತನ್ನ ಎಲ್ಲ ಬಗೆಯ ಟೆಲಿವಿಷನ್‌ಗಳ ಬೆಲೆಯಲ್ಲಿ ಭಾರಿ ರಿಯಾಯ್ತಿ ಪ್ರಕಟಿಸಿದೆ.

ಸ್ಮಾರ್ಟ್‌ ಟಿವಿಗಳ ಬೆಲೆ ₹ 12,499 ರಿಂದ  ಮತ್ತು ‘4ಕೆ’ ಟಿವಿಗಳ ಬೆಲೆ ₹ 16,999 ರಿಂದ ಆರಂಭಗೊಳ್ಳಲಿದೆ.

ಹೀರೊ ಮೋಟೊಕಾರ್ಪ್‌ ಮಾರಾಟ ದಾಖಲೆ
ಬೆಂಗಳೂರು:
ಬೈಕ್‌ ತಯಾರಿಕಾ ಸಂಸ್ಥೆ ಹೀರೊ ಮೋಟೊಕಾರ್ಪ್‌, ಸೆಪ್ಟೆಂಬರ್‌ ತಿಂಗಳಲ್ಲಿ 7 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಆರು ತಿಂಗಳಲ್ಲಿ 42 ಲಕ್ಷಕ್ಕೂ ಹೆಚ್ಚು ಮೋಟರ್‌ ಸೈಕಲ್‌ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಹಬ್ಬಗಳ ದಿನಗಳಲ್ಲಿ ದಾಖಲೆ ಸಂಖ್ಯೆಯ ಬೈಕ್‌ಗಳು ಮಾರಾಟಗೊಳ್ಳುವ ನಿರೀಕ್ಷೆ ಇದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !