ನವದೆಹಲಿ: ಸರ್ಕಾರದ ನಿಯಮಗಳ ಕಾರಣದಿಂದಾಗಿ ಭಾರತದ ನವೋದ್ಯಮಗಳಿಗೆ ಭಾರತದಲ್ಲಿಯೇ ಹೂಡಿಕೆ ಸಿಗುತ್ತಿಲ್ಲ, ಇದು ಅವುಗಳಿಗೆ ಅಡ್ಡಿಯಾಗಿ ಪರಿಣಮಿಸಿದೆ ಎಂದು ಆರೀನ್ ಕ್ಯಾಪಿಟಲ್ನ ಅಧ್ಯಕ್ಷ ಮೋಹನದಾಸ್ ಪೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತವು ವಿಶ್ವದಲ್ಲಿ ಮೂರನೆಯ ಅತಿದೊಡ್ಡ ನವೋದ್ಯಮ ಕೇಂದ್ರವಾಗಿದೆ. ಹೀಗಿದ್ದರೂ, ಈ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳದೆ ಇದ್ದರೆ ಜಾಗತಿಕ ಮಟ್ಟದಲ್ಲಿ ಹೊಸತನವನ್ನು ಕಂಡುಕೊಳ್ಳುವ ಸ್ಪರ್ಧೆಯಲ್ಲಿ ಭಾರತವು ಹಿಂದುಳಿಯುವ ಅಪಾಯ ಇದೆ ಎಂದು ಪೈ ಹೇಳಿದ್ದಾರೆ.

‘ನಮ್ಮಲ್ಲಿ 1.65 ಲಕ್ಷ ನೋಂದಾಯಿತ ನವೋದ್ಯಮಗಳಿವೆ. 22 ಸಾವಿರ ನವೋದ್ಯಮಗಳಿಗೆ ಹೂಡಿಕೆ ಸಿಕ್ಕಿದೆ. ಅವೆಲ್ಲ ಒಟ್ಟು 600 ಬಿಲಿಯನ್ ಡಾಲರ್ (₹51 ಲಕ್ಷ ಕೋಟಿ) ಮೌಲ್ಯ ಸೃಷ್ಟಿಸಿವೆ. ಆದರೆ ಅಗತ್ಯ ಪ್ರಮಾಣದ ಬಂಡವಾಳ ಸಿಗದಿರುವುದು ನವೋದ್ಯಮಗಳ ಅತಿದೊಡ್ಡ ಸಮಸ್ಯೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.