ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲೇ ಸ್ಟೋರ್‌ಗೆ ಮರಳಿದ ಮ್ಯಾಟ್ರಿಮೋನಿ ಆ್ಯಪ್‌ಗಳು

Published 3 ಮಾರ್ಚ್ 2024, 16:29 IST
Last Updated 3 ಮಾರ್ಚ್ 2024, 16:29 IST
ಅಕ್ಷರ ಗಾತ್ರ

ನವದೆಹಲಿ: ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಗೂಗಲ್‌ ಕಂಪನಿ ವಿಧಿಸಿರುವ ನಿಯಮಗಳಿಗೆ ಸಮ್ಮತಿಸಿದ ಬಳಿಕ ಮ್ಯಾಟ್ರಿಮೋನಿಡಾಟ್‌ಕಾಂ ಕಂಪನಿಯ ಆ್ಯಪ್‌ಗಳು ಪ್ಲೇ ಸ್ಟೋರ್‌ಗೆ ಮರಳಿವೆ.

‘ಗೂಗಲ್‌ನ ನಿಯಮಗಳ ಪಾಲನೆ ಸಂಬಂಧ ಒಪ್ಪಿಗೆ ಸೂಚಿಸಲಾಗಿದೆ. ಹಾಗಾಗಿ, ಕಂಪನಿಗೆ ಸೇರಿದ ಬೆಂಗಾಲಿ ಮ್ಯಾಟ್ರಿಮೋನಿ, ಮರಾಠಿ ಮ್ಯಾಟ್ರಿಮೋನಿ, ತಮಿಳು ಮ್ಯಾಟ್ರಿಮೋನಿ, ಜೋಡಿ ಮತ್ತು ಭಾರತ್ ಮ್ಯಾಟ್ರಿಮೋನಿ ಸೇರಿದಂತೆ ಎಂಟು ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಲ್ಲಿ ಮರುಸ್ಥಾಪಿಸಲಾಗಿದೆ. ಆದರೆ, ಕಂಪನಿಗೆ ಸೇರಿದ 100ಕ್ಕೂ ಹೆಚ್ಚು ಆ್ಯಪ್‌ಗಳನ್ನು ಇನ್ನೂ ಮರುಸ್ಥಾಪಿಸಿಲ್ಲ’ ಎಂದು ‘ಮ್ಯಾಟ್ರಿಮೋನಿಡಾಟ್‌ಕಾಂ’ನ ಸಂಸ್ಥಾಪಕ ಹಾಗೂ ಸಿಇಒ ಮುರುಗವೇಲ್ ಜೆ. ಹೇಳಿದ್ದಾರೆ.

‘ಭಾರತೀಯ ಆ್ಯ‍ಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೂ, ಗೂಗಲ್ ಸರ್ಕಾ‌ರದ ಸೂಚನೆಯನ್ನು ಪಾಲಿಸಿಲ್ಲ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇಂದು ಸಭೆ: ಪ್ಲೇ ಸ್ಟೋರ್‌ನಿಂದ ಹಲವು ಕಂಪನಿಗಳ ಆ್ಯಪ್‌ಗಳನ್ನು ತೆಗೆದುಹಾಕಿದ್ದ ಬಗ್ಗೆ ಇಂಟರ್‌ನೆಟ್‌ ಆ್ಯಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಐಎಎಂಎಐ) ತೀವ್ರ ಕಳವಳ ವ್ಯಕ್ತಪಡಿಸಿದೆ. 

‘ಗೂಗಲ್‌ ಮತ್ತು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿರುವ ಕಂಪನಿಗಳ ಜೊತೆಗೆ ಸೋಮವಾರ ಕೇಂದ್ರ ಸರ್ಕಾರವು ಸಭೆ ನಡೆಸಲಿದೆ. ಈ ಸಭೆಯಲ್ಲಿ ಸಮಸ್ಯೆ ಬಗೆಹರಿಸುವ ಸಾಧ್ಯತೆಯಿದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT