ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರತ್ ಮೂಲದ ಕಂಪನಿಯಲದಲ್ಲಿ ₹ 650 ಕೋಟಿ ಮೌಲ್ಯದ ವಹಿವಾಟು ಪತ್ತೆ: ಸಿಬಿಡಿಟಿ

ಸೂರತ್‌: ರಿಯಲ್‌ ಎಸ್ಟೇಟ್‌ ಕಂಪನಿ ಮೇಲೆ ಐಟಿ ದಾಳಿ
Last Updated 10 ಡಿಸೆಂಬರ್ 2021, 19:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಿಯಲ್ ಎಸ್ಟೇಟ್ ಮತ್ತು ಹಣಕಾಸು ವ್ಯವಹಾರದಲ್ಲಿ ತೊಡಗಿರುವ ಸೂರತ್ ಮೂಲದ ಕಂಪನಿಯ ಮೇಲೆ ಇತ್ತೀಚೆಗೆ ನಡೆಸಿದ ದಾಳಿಯ ಸಂದರ್ಭದಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆಯು ₹ 650 ಕೋಟಿಗೂ ಹೆಚ್ಚು ಅನುಮಾನಾಸ್ಪದ ವಹಿವಾಟುಗಳನ್ನು ಪತ್ತೆಹಚ್ಚಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಶುಕ್ರವಾರ
ತಿಳಿಸಿದೆ.

ಡಿಸೆಂಬರ್ 3 ರಂದು ಸೂರತ್‌ ಹಾಗೂ ಮುಂಬೈನಲ್ಲಿ ಕಂಪನಿ ಒಡೆತನದಲ್ಲಿರುವ ಸುಮಾರು 40 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಅನುಮಾನ ಹುಟ್ಟಿಸಿರುವ ಖಾತೆ ಪುಸ್ತಕಗಳನ್ನು ವಶಕ್ಕೆ ಪಡೆಯಲಾಗಿದೆ.ಕೆಲವು ವಹಿವಾಟುಗಳಿಗೆ ‘ಕೋಡ್‌’ ಬಳಸಿ ಅವುಗಳನ್ನು ನಿರ್ವಹಿಸಿರುವುದು ಕಂಡುಬಂದಿದೆ ಎಂದು ಸಿಬಿಡಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ಸಾಕ್ಷಿಗಳ ಪ್ರಾಥಮಿಕ ವಿಶ್ಲೇಷಣೆಯು ಫ್ಲಾಟ್‌ಗಳು/ಭೂಮಿಯ ಮಾರಾಟದ ಮೇಲೆ ₹300 ಕೋಟಿಗಿಂತ ಹೆಚ್ಚು ಲೆಕ್ಕಕ್ಕೆ ಬಾರದ ನಗದು ಸ್ವೀಕರಿಸಲಾಗಿದೆ ಎಂಬುದನ್ನ ಸೂಚಿಸು
ತ್ತದೆ. ಇದು ಖಾತೆ ಪುಸ್ತಕದಲ್ಲಿ ದಾಖಲಾಗಿಲ್ಲ’ ಎಂದು
ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT