ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12,349 ಕಿ.ಮೀ. ಹೆದ್ದಾರಿ ನಿರ್ಮಾಣ: ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ

Published 10 ಏಪ್ರಿಲ್ 2024, 16:11 IST
Last Updated 10 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2023–24ನೇ ಆರ್ಥಿಕ ವರ್ಷದಲ್ಲಿ 12,349 ಕಿ.ಮೀ.ನಷ್ಟು ಹೆದ್ದಾರಿ ನಿರ್ಮಿಸಿದೆ. ಇದು ಸಚಿವಾಲಯದ ಇತಿಹಾಸದಲ್ಲಿ ಎರಡನೇ ದಾಖಲೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2020–21ರಲ್ಲಿ 13,327 ಕಿ.ಮೀ.ನಷ್ಟು ಹೆದ್ದಾರಿ ನಿರ್ಮಿಸಿದ್ದು, ದಾಖಲೆಯಾಗಿದೆ. 

2022–23ರಲ್ಲಿ 10,331 ಕಿ.ಮೀ, 2021–22ರಲ್ಲಿ 10,457 ಕಿ.ಮೀ. ಹಾಗೂ 2019–20ರಲ್ಲಿ 10,237 ಕಿ.ಮೀ.ನಷ್ಟು ಹೆದ್ದಾರಿ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. 

2023–24ರಲ್ಲಿ 8,581 ಹೆದ್ದಾರಿ ಪ್ರಾಜೆಕ್ಟ್‌ಗಳಿಗೆ ಸಚಿವಾಲಯವು ಅನುಮೋದನೆ ನೀಡಿದೆ. ಖಾಸಗಿ ಹೂಡಿಕೆಯು ಸೇರಿ ಒಟ್ಟು ಬಂಡವಾಳ ವೆಚ್ಚವು ₹3.01 ಲಕ್ಷ ಕೋಟಿ ಆಗಿದೆ ಎಂದು ವಿವರಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರವು ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ ಗಾಯಾಳುಗಳು ₹1.5 ಲಕ್ಷದವರೆಗೂ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT