ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಮೋತಿಲಾಲ್‌ ಓಸ್ವಾಲ್‌ ಟವರ್‌ ಉದ್ಘಾಟನೆ

Published 26 ಮೇ 2024, 16:05 IST
Last Updated 26 ಮೇ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬೈ ಮೂಲದ ಹಣಕಾಸು ಸೇವೆಗಳ ಕಂಪನಿಯಾದ ಮೋತಿಲಾಲ್‌ ಓಸ್ವಾಲ್‌ ಫೈನಾನ್ಷಿಯಲ್‌ ಸರ್ವಿಸಸ್‌, ನಗರದ ಶಿವಾನಂದ ವೃತ್ತದ ಬಳಿ ಮೋತಿಲಾಲ್‌ ಓಸ್ವಾಲ್‌ ಕಚೇರಿಯನ್ನು (ಟವರ್) ಆರಂಭಿಸಿದೆ.

ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರು ಇತ್ತೀಚೆಗೆ ಈ ಕಚೇರಿಯನ್ನು ಉದ್ಘಾಟಿಸಿದರು.

ಈ ಕಚೇರಿ ಮೂಲಕ ಕಂಪನಿಯು ತನ್ನ ಆಸ್ತಿ ನಿರ್ವಹಣೆ, ಬ್ರೋಕಿಂಗ್ ಮತ್ತು ವಿತರಣೆ, ರಿಯಲ್‌ ಎಸ್ಟೇಟ್‌ ಫೈನಾನ್ಸ್‌, ಖಾಸಗಿ ಸಂಪತ್ತು, ಆನ್‌ಲೈನ್ ಸಲಹೆ, ಐಎಫ್‌ಎ ಮತ್ತು ಪಿಸಿಜಿ ಸಲಹಾ ವ್ಯವಹಾರ ನಡೆಸಲಿದೆ. ಈ ಹೊಸ ಕಚೇರಿಯಲ್ಲಿ ಅಂದಾಜು 435 ಉದ್ಯೋಗಿಗಳು ಕೆಲಸ ಮಾಡಲು ಸ್ಥಳಾವಕಾಶವಿದೆ ಎಂದು ತಿಳಿಸಿದೆ.

ಕಂಪನಿಯಲ್ಲಿ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸ ಮಾಡುತ್ತಿದ್ದು, 70 ಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಕಂಪನಿಯಿಂದ ಆಡಳಿತಾತ್ಮಕ ಸೇವೆ ಒದಗಿಸುವ ಒಟ್ಟು ಆಸ್ತಿಗಳ ಮೌಲ್ಯವು ₹3.8 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದೆ.

‘ಕಂಪನಿಯ ಕಾರ್ಯಾಚರಣೆಗೆ ಬೆಂಗಳೂರು ದಕ್ಷಿಣ ಭಾರತದ ಪ್ರಮುಖ ನಗರವಾಗಿದೆ. ಈ ಭಾಗದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹೊಸದಾಗಿ ಆರಂಭಿಸಲಾದ ಈ ಕಚೇರಿ ರಾಜ್ಯದ ಗ್ರಾಹಕರಿಗೆ ಆಧುನಿಕ ಸೇವೆಗಳನ್ನು ಒದಗಿಸಲಿದ್ದು, ಸ್ಥಳೀಯ ಗ್ರಾಹಕರ ಅಗತ್ಯತೆ ಪೂರೈಸಲು ಆದ್ಯತೆ ನೀಡಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೋತಿಲಾಲ್ ಓಸ್ವಾಲ್ ಹೇಳಿದರು.

‘ಬೆಂಗಳೂರಿನ ಮೋತಿಲಾಲ್ ಓಸ್ವಾಲ್ ಟವರ್‌ನ ಆರಂಭವು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಇದು ನಮ್ಮ ಪ್ರಾದೇಶಿಕ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿತರಣೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ’ ಎಂದು ಕಂಪನಿಯ ಅಧ್ಯಕ್ಷ ಮತ್ತು ಸಹ ಸಂಸ್ಥಾಪಕ ರಾಮ್‌ದೇವ್ ಅಗರವಾಲ್ ವಿಶ್ವಾಸ ವ್ಯಕ್ತಪಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT