ಶುಕ್ರವಾರ, ಫೆಬ್ರವರಿ 26, 2021
20 °C

‘ಎಂಎಸ್‌ಎಂಇ: ಉನ್ನತಾಧಿಕಾರಿ ನೇಮಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಂಎಸ್‌ಎಂಇ ವಲಯ ಎದುರಿಸುತ್ತಿರುವ ನಗದು ಲಭ್ಯತೆ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಪ್ರಧಾನ ವ್ಯವಸ್ಥಾಪಕ ಅಥವಾ ಪ್ರಧಾನ ವ್ಯವಸ್ಥಾಪಕ ಮಟ್ಟದ ಅಧಿಕಾರಿಯನ್ನು ನೇಮಿಸುವಂತೆ ಕೇಂದ್ರ ಸರ್ಕಾರವು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.

ವರದಿ ಸಿದ್ಧಪಡಿಸುವ ವೇಳೆ, ಬ್ಯಾಂಕ್‌ಗಳಿಗೆ ಸಾಲ ಪಡೆದಿರುವ, ಸಾಲ ಬಾಕಿ ಉಳಿಸಿಕೊಂಡಿರುವ, ಸಾಲ ಮರು ಹೊಂದಾಣಿಕೆ ಅಥವಾ ವಸೂಲಿ ಪ್ರಕ್ರಿಯೆ ಕುರಿತು ಹಂತ ಹಂತವಾಗಿ ಮಾಹಿತಿ ಸಂಗ್ರಹಿಸಬಹುದು ಎಂದು ತಿಳಿಸಿದೆ.

ಹೊಸದಾಗಿ ಯಾವ ಎಂಎಸ್‌ಎಂಇಗಳಿಗೆ ಸಾಲ ನೀಡಲಾಗಿದೆ ಮತ್ತು ಯಾವ ಉದ್ದಿಮೆಗಳು ಬ್ಯಾಂಕ್‌ ವ್ಯಾಪ್ತಿಯಿಂದ ಹೊರಗೆ ಇವೆ ಎನ್ನುವ ಬಗ್ಗೆ ವಿವರವಾದ ವರದಿ ನೀಡುವಂತೆ ಬ್ಯಾಂಕ್‌ಗಳಿಗೆ ಕೇಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು