ನವದೆಹಲಿ: ಪಾವತಿ ಮಾಡಬೇಕಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೊತ್ತದಲ್ಲಿ ಶೇಕಡ 1ರಷ್ಟು ಕಡ್ಡಾಯವಾಗಿ ನಗದು ರೂಪದಲ್ಲಿ ಇರಬೇಕು ಎಂಬ ನಿಯಮವು ಸಣ್ಣ ಉದ್ದಿಮೆಗಳು ಮತ್ತು ಸಣ್ಣ ವಿತರಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ತಿಂಗಳಿಗೆ ₹ 50 ಲಕ್ಷ ಅಥವಾ ವಾರ್ಷಿಕ ₹ 6 ಕೋಟಿ ವಹಿವಾಟು ನಡೆಸುವ ಕಂಪನಿಗಳಿಗೆ ಮಾತ್ರವೇ ಈ ಹೊಸ ನಿಯಮ ಅನ್ವಯ ಆಗಲಿದೆ ಎಂದು ಹೇಳಿವೆ.

ನಕಲಿ ಇನ್‌ವಾಯ್ಸ್ ಸೃಷ್ಟಿಸಿ ತೆರಿಗೆ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಈ ನಿಯಮವನ್ನು ರೂಪಿಸಿದೆ. ಜನವರಿ 1ರಿಂದ ಜಿಎಸ್‌ಟಿ ಪಾವತಿಸಲು, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಬಳಕೆಯು ಶೇ 99ಕ್ಕೆ ಮಿತಿಗೊಳ್ಳಲಿದೆ.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಥವಾ ಪಾಲುದಾರ ₹ 1 ಲಕ್ಷಕ್ಕಿಂತ ಅಧಿಕ ಆದಾಯ ತೆರಿಗೆ ಪಾವತಿಸಿದಲ್ಲಿ ಅಥವಾ ₹ 1 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ಮರುಪಾವತಿ ಪಡೆದಲ್ಲಿ ಹೊಸ ನಿಯಮ ಅನ್ವಯಿಸುವುದಿಲ್ಲ. ಅದೇ ರೀತಿ ಸರ್ಕಾರಿ ಇಲಾಖೆಗಳು, ಪಿಎಸ್‌ಯುಗಳು ಹಾಗೂ ಸ್ಥಳೀಯ ಆಡಳಿತಗಳಿಗೆ ಸಹ ಅನ್ವಯ ಆಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.