ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಎಂಇ ಚೇತರಿಕೆಗೆ ಬೇಕು 8 ತಿಂಗಳು: ಡಿಆ್ಯಂಡ್‌ಬಿ

Last Updated 11 ಆಗಸ್ಟ್ 2020, 16:26 IST
ಅಕ್ಷರ ಗಾತ್ರ

ನವದೆಹಲಿ: ‘ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್‌ಎಂಇ) ಕೋವಿಡ್‌–19 ಪರಿಣಾಮಗಳಿಂದ ಚೇತರಿಸಿಕೊಳ್ಳಲು ಕನಿಷ್ಠ ಏಳರಿಂದ ಎಂಟು ತಿಂಗಳುಗಳು ಬೇಕಾಗಲಿವೆ’ ಎಂದು ಡನ್‌ ಆ್ಯಂಡ್‌ ಬ್ರಾಡ್‌ಸ್ಟ್ರೀಟ್‌ನ (ಡಿಆ್ಯಂಡ್‌ಬಿ) ಮುಖ್ಯ ಆರ್ಥಿಕ ತಜ್ಞ ಅರುಣ್‌ ಸಿಂಗ್‌ ಹೇಳಿದ್ದಾರೆ.

‘ದೇಶದ ಜಿಡಿಪಿಗೆ ಶೇಕಡ 29ರಷ್ಟು ಕೊಡುಗೆ ನೀಡುತ್ತಿರುವ ಈ ವಲಯವು, ಕೋವಿಡ್‌ನಿಂದಾಗಿ ಅತಿ ಹೆಚ್ಚು ಬಾಧಿತವಾಗಿದೆ. ಈ ವಲಯದ ಉದ್ದಿಮೆಗಳು ಯಾವ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಹಾಗೂ ಅವು ಎಷ್ಟರಮಟ್ಟಿಗೆ ಡಿಜಿಟಲ್‌ ವಹಿವಾಟಿಗೆ ತೆರೆದುಕೊಳ್ಳಲಿವೆ ಎನ್ನುವುದನ್ನು ಆಧರಿಸಿ ಚೇತರಿಕೆಯ ಪ್ರಮಾಣ ನಿರ್ಧಾರವಾಗಲಿದೆ’ ಎಂದು ವೆಬಿನಾರ್‌ ಒಂದರಲ್ಲಿ ಅವರು ಹೇಳಿದ್ದಾರೆ.

‘ಆನ್‌ಲೈನ್‌ ಗೇಮಿಂಗ್‌, ದೂರಸಂಪರ್ಕ ಮತ್ತು ಇ–ಶಿಕ್ಷಣ ಕ್ಷೇತ್ರದ ಎಂಎಸ್‌ಎಂಇಗಳು ಸಕಾರಾತ್ಮಕ ಬೆಳವಣಿಗೆ ಕಾಣುತ್ತಿವೆ. ಇನ್ನೊಂದೆಡೆ, ಆಹಾರ, ಔಷಧ, ಐ.ಟಿ. ಸಂಬಂಧಿತ ಸೇವೆಗಳು, ಬ್ಯಾಂಕಿಂಗ್‌, ರಿಟೇಲ್‌, ವಾಹನೋದ್ಯಮ, ರಿಯಲ್ ಎಸ್ಟೇಟ್‌ ಮತ್ತು ಚಿನ್ನಾಭರಣ ವಲಯಗಳಲ್ಲಿನ ಉದ್ದಿಮೆಗಳು ಚೇತರಿಸಿಕೊಳ್ಳಲು ಆರು ತಿಂಗಳಿನಿಂದ ಒಂದು ವರ್ಷವೇ ಬೇಕಾಗಲಿದೆ’ ಎನ್ನುವುದು ಸಿಂಗ್ ಅವರ ಅಂದಾಜು.

‘ಸರಕು ಸಾಗಣೆ, ಉಗ್ರಾಣ, ಲೋಹ, ಮಾಧ್ಯಮ ಮತ್ತು ಮನರಂಜನಾ ವಲಯಗಳು ಚೇತರಿಸಿಕೊಳ್ಳಲು ಒಂದು ವರ್ಷ ಹಿಡಿಯಲಿದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT