ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತೂಟ್‌ ಫೈನಾನ್ಸ್‌; ಮನೆ ಬಾಗಿಲಲ್ಲಿ ಸಾಲ ಸೌಲಭ್ಯ

Last Updated 10 ಜುಲೈ 2020, 12:44 IST
ಅಕ್ಷರ ಗಾತ್ರ

ಕೊಚ್ಚಿ: ಚಿನ್ನಾಭರಣಗಳಿಗೆ ಸಾಲ ನೀಡುವ ದೇಶದ ಅತಿದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಮುತ್ತೂಟ್‌ ಫೈನಾನ್ಸ್‌, ಗ್ರಾಹಕರ ಮನೆ ಬಾಗಿಲಲ್ಲಿ ಸಾಲ ಸೌಲಭ್ಯದ (Loan@Home) ಸೇವೆ ಆರಂಭಿಸಿದೆ.

ಈ ಸೇವೆಯಡಿ, ಗ್ರಾಹಕರು ಚಿನ್ನದ ಸಾಲ ಪಡೆಯಲು ಕಂಪನಿಯ ಶಾಖೆಗೆ ಭೇಟಿ ಕೊಡುವ ಅಗತ್ಯ ಇರುವುದಿಲ್ಲ. ಸಂಸ್ಥೆಯ ಸಿಬ್ಬಂದಿಯೇ ಗ್ರಾಹಕರು ಸೂಚಿಸಿದ ದಿನ ಮತ್ತು ಸಮಯಕ್ಕೆ ಅವರ ಮನೆಗೆ ಬಂದು ಆಭರಣಗಳನ್ನು ಪರೀಕ್ಷಿಸಿ ಡಿಜಿಟಲ್‌ ಕೆವೈಸಿ ಪರಿಗಣಿಸಿ ಸಾಲ ಮಂಜೂರು ಮಾಡುತ್ತಾರೆ. ಸಾಲದ ಮೊತ್ತವು ಗ್ರಾಹಕರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗುವುದು.

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿನ ಪ್ರಯಾಣ ನಿರ್ಬಂಧ, ಅಂತರ ಮತ್ತು ಸುರಕ್ಷತೆ ಕಾಯ್ದುಕೊಳ್ಳುವ ಉದ್ದೇಶಕ್ಕೆ ಗ್ರಾಹಕರು ಸಂಸ್ಥೆಯ ಶಾಖೆಗಳಿಗೆ ಭೇಟಿ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಸ್ಥೆಯ ಸಿಬ್ಬಂದಿಯೇ ಗ್ರಾಹಕರ ಬಳಿಗೆ ತೆರಳಿ ಸಾಲ ನೀಡುವ ಸೌಲಭ್ಯ ಇದಾಗಿದೆ.

‘ಇದೊಂದು ಮೊಬೈಲ್‌ ಆ್ಯಪ್‌ ಆಧರಿಸಿದ ಡಿಜಿಟಲ್‌ ಸೇವೆಯಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್‌ ಅಲೆಕ್ಸಾಂಡರ್‌ ಮುತ್ತೂಟ್ ಹೇಳಿದ್ದಾರೆ. ಗ್ರಾಹಕರು Loan@Home ಮೊಬೈಲ್‌ ಆ್ಯಪ್‌, online.muthootfinance.com ಅಂತರ್ಜಾಲ ತಾಣದಲ್ಲಿ ಸಾಲಕ್ಕೆ ಮನವಿ ಸಲ್ಲಿಸಿ ಈ ಸೌಲಭ್ಯ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT