ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಪಿ: ಆಗಸ್ಟ್‌ನಲ್ಲಿ ದಾಖಲೆಯ ಹೂಡಿಕೆ

Published 11 ಸೆಪ್ಟೆಂಬರ್ 2023, 13:13 IST
Last Updated 11 ಸೆಪ್ಟೆಂಬರ್ 2023, 13:13 IST
ಅಕ್ಷರ ಗಾತ್ರ

ಮುಂಬೈ : ಆಗಸ್ಟ್‌ ತಿಂಗಳಲ್ಲಿ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ದಾಖಲೆಯ ₹15,813 ಕೋಟಿ ಹೂಡಿಕೆ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಸಾಲಪತ್ರ ಆಧಾರಿತ (ಡೆಟ್) ಯೋಜನೆಗಳಿಂದ ನಿವ್ವಳ ₹25,872 ಕೋಟಿಯನ್ನು ಹಿಂಪಡೆದಿದ್ದಾರೆ.

ಜುಲೈ ತಿಂಗಳಲ್ಲಿ ಹೂಡಿಕೆದಾರರು ₹15,244 ಕೋಟಿಯನ್ನು ಎಸ್‌ಐಪಿ ಮೂಲಕ ತೊಡಗಿಸಿದ್ದು ಅದುವರೆಗಿನ ದಾಖಲೆಯಾಗಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟದ (ಎಎಂಎಫ್‌ಐ) ಮುಖ್ಯ ಕಾರ್ಯನಿರ್ವಾಹಕ ಎನ್.ಎಸ್. ವೆಂಕಟೇಶ್ ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಹೂಡಿಕೆದಾರರು ದಾಖಲೆಯ 35 ಲಕ್ಷ ಹೊಸ ಎಸ್‌ಐಪಿಗಳನ್ನು ಆರಂಭಿಸಿದ್ದಾರೆ. ಸಣ್ಣ ಹೂಡಿಕೆದಾರರು ಬಂಡವಾಳ ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದನ್ನು ಮುಂದುವರಿಸಲಿದ್ದಾರೆ ಎಂಬುದನ್ನು ಎಸ್‌ಐಪಿ ಹರಿವು ಸೂಚಿಸುತ್ತಿದೆ ಎಂದು ವೆಂಕಟೇಶ್ ಹೇಳಿದ್ದಾರೆ.

ಆಗಸ್ಟ್‌ನಲ್ಲಿ ಒಟ್ಟು 19.58 ಲಕ್ಷ ಎಸ್‌ಐಪಿ ಹೂಡಿಕೆಗಳು ಸ್ಥಗಿತಗೊಂಡಿವೆ ಅಥವಾ ಅವಧಿ ಪೂರ್ಣಗೊಳಿಸಿವೆ. ಇದು ಕೂಡ ಒಂದು ದಾಖಲೆ. ಜುಲೈ ತಿಂಗಳಲ್ಲಿ ಈ ಸಂಖ್ಯೆ 17 ಲಕ್ಷ ಆಗಿತ್ತು ಎಂದು ಅವರು ಹೇಳಿದ್ದಾರೆ.

ದೇಶದ ಮ್ಯೂಚುವಲ್ ಫಂಡ್ ಉದ್ಯಮವು ನಿರ್ವಹಣೆ ಮಾಡುತ್ತಿರುವ ಸಂಪತ್ತಿನ ಒಟ್ಟು ಮೊತ್ತವು ಆಗಸ್ಟ್‌ ಅಂತ್ಯಕ್ಕೆ ₹46.93 ಲಕ್ಷ ಕೋಟಿಗೆ ತಲುಪಿದೆ. ಎಸ್‌ಐಪಿ ಮೂಲಕ ಹೂಡಿಕೆದಾರರು ನಿಶ್ಚಿತ ಮೊತ್ತವನ್ನು ಪ್ರತಿ ತಿಂಗಳು ಮ್ಯೂಚುವಲ್‌ ಫಂಡ್‌ಗಳಲ್ಲಿ ತೊಡಗಿಸಬಹುದು.

ಆಗಸ್ಟ್‌ನಲ್ಲಿ ಚಿನ್ನದ ವಿನಿಮಯ ವಹಿವಾಟು ನಿಧಿಗಳು (ಇಟಿಎಫ್) ₹1,000 ಕೋಟಿಗಿಂತ ಹೆಚ್ಚಿನ ಹೂಡಿಕೆಯನ್ನು ಸೆಳದಿವೆ. ಇದಕ್ಕೆ ಕಾರಣ ಚಿನ್ನದ ಬೆಲೆಯಲ್ಲಿ ಆಗಿರುವ ತುಸು ಇಳಿಕೆ ಎಂದು ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT