ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಫ್‌ಒ ಸಂಗ್ರಹ ನಾಲ್ಕು ಪಟ್ಟು ಏರಿಕೆ

Published 19 ನವೆಂಬರ್ 2023, 15:33 IST
Last Updated 19 ನವೆಂಬರ್ 2023, 15:33 IST
ಅಕ್ಷರ ಗಾತ್ರ

ನವದೆಹಲಿ: ಹೊಸದಾಗಿ ಆರಂಭಿಸುವ ಫಂಡ್‌ಗಳ (ಎನ್‌ಎಫ್‌ಒ) ಮೂಲಕ ಮ್ಯೂಚುವಲ್‌ ಫಂಡ್‌ ಕಂಪನಿಗಳು ಸಂಗ್ರಹಿಸಿದ ಮೊತ್ತವು ಸೆಪ್ಟೆಂಬರ್ ತ್ರೈಮಾಸಿಕದ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದು, ₹22,049 ಕೋಟಿಗೆ ತಲುಪಿದೆ. ಜೂನ್ ತ್ರೈಮಾಸಿಕದಲ್ಲಿ ಎನ್‌ಎಫ್‌ಒ ಮೂಲಕ ₹5,539 ಕೋಟಿ ಮಾತ್ರ ಸಂಗ್ರಹ ಆಗಿತ್ತು.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು 48 ಹೊಸ ಫಂಡ್‌ಗಳು ಶುರುವಾಗಿವೆ, ಜೂನ್ ತ್ರೈಮಾಸಿಕದಲ್ಲಿ 25 ಹೊಸ ಫಂಡ್‌ಗಳು ಶುರುವಾಗಿದ್ದವು ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾ ಕಲೆಹಾಕಿರುವ ದತ್ತಾಂಶ ಹೇಳಿದೆ.

ಮುಂದಿನ ತ್ರೈಮಾಸಿಕಗಳಲ್ಲಿ ಹೊಸ ಆಸ್ತಿ ನಿರ್ವಹಣಾ ಕಂಪನಿಗಳು ಕಾರ್ಯ ಆರಂಭಿಸಲಿವೆ, ಹೊಸ ಎನ್‌ಎಫ್‌ಒಗಳು ಬರುವ ನಿರೀಕ್ಷೆ ಇದೆ ಎಂದು ಫೈಯರ್ಸ್‌ ಸಂಸ್ಥೆಯ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಗೋಪಾಲ್ ಕವಲಿರೆಡ್ಡಿ ಹೇಳಿದ್ದಾರೆ.

‘ದೇಶದ ಬೆಳವಣಿಗೆಯ ವಿಚಾರವಾಗಿ ಹೂಡಿಕೆದಾರರಿಗೆ ದೃಢ ವಿಶ್ವಾಸ ಇದೆ. ಹೆಚ್ಚೆಚ್ಚು ಕಂಪನಿಗಳು ಬಂಡವಾಳ ಮಾರುಕಟ್ಟೆಗಳಿಂದ ಹಣ ಸಂಗ್ರಹಿಸಲು ಮುಂದಾಗುತ್ತಿವೆ. ಷೇರುಪೇಟೆ ನೋಂದಾಯಿತ ಕಂಪನಿಗಳಿಗೆ ನೆರವಾಗುವ ಉದ್ದೇಶದಿಂದ ಆಸ್ತಿ ನಿರ್ವಹಣಾ ಕಂಪನಿಗಳು ಈಕ್ವಿಟಿ ಹಾಗೂ ಹೈಬ್ರಿಡ್ ವಿಭಾಗಗಳಲ್ಲಿ ಹೊಸ ಫಂಡ್‌ ಯೋಜನೆಗಳನ್ನು ರೂಪಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಮಿಡ್‌, ಸ್ಮಾಲ್ ಮತ್ತು ಮೈಕ್ರೊ ಕ್ಯಾಪ್ ವಿಭಾಗಗಳಲ್ಲಿ ಹೊಸ ಫಂಡ್‌ಗಳನ್ನು ರೂಪಿಸುತ್ತಿವೆ’ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ, ಷೇರುಪೇಟೆ ಸೂಚ್ಯಂಕಗಳು ಏರುಗತಿಯಲ್ಲಿ ಇದ್ದಾಗ ಹೊಸ ಫಂಡ್‌ಗಳನ್ನು ಆರಂಭಿಸಲಾಗುತ್ತದೆ. ‘ಈಕ್ವಿಟಿ ಹೂಡಿಕೆಗಳ ವಿಚಾರವಾಗಿ ಆಶಾದಾಯಕ ವಾತಾವರಣ ಇರುವ ಕಾರಣ ಎನ್‌ಎಫ್‌ಒಗಳಿಗೆ ಹೆಚ್ಚಿನ ಹಣ ಹರಿದುಬರುತ್ತಿದೆ’ ಎಂದು ಆನಂದ ರಾಠಿ ವೆಲ್ತ್ ಸಂಸ್ಥೆಯ ಉಪ ಸಿಇಒ ಫಿರೋ‌ಜ್ ಅಜೀಜ್ ಹೇಳಿದ್ದಾರೆ.

ಆದರೆ ಎನ್‌ಎಫ್‌ಒಗಳ ವಿಚಾರವಾಗಿ ಹೂಡಿಕೆದಾರರು ಅವಸರ ತೋರುವ ಅಗತ್ಯವಿಲ್ಲ. ಎನ್‌ಎಫ್‌ಒ ಹೂಡಿಕೆಯಿಂದ ಹೆಚ್ಚುವರಿ ಪ್ರಯೋಜನಗಳೇನೂ ಇರುವುದಿಲ್ಲ ಎಂದು ಅಜೀಜ್ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT